ಮನೆಯಲ್ಲಿ 4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

| Published : Dec 06 2023, 01:15 AM IST

ಮನೆಯಲ್ಲಿ 4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಯಶವಂತಪುರ ಅಂಬೇಡ್ಕರ್ ನಗರದ 6ನೇ ಕ್ರಾಸ್ ವಾಸಿ ವಸೀಂ ಖಾನ್ ಪತ್ನಿ ಫರ್ಹಾನ್ ತಾಜ್ ಎಂಬುವರು ಸುಮಾರು 365 ಗ್ರಾಂ ಚಿನ್ನಾಭರಣ ಕಳುವಾಗಿರುವ ಕುರಿತು ಬೆಂಗಳುರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ಪ್ರಕರಣ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಕಳೆದ ನ.29 ರಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ರಾಮನಗರ ಪುರ ಪೊಲೀಸ್ ಠಾಣೆಗೆ ಟಪಾಲ್ ಬಂದಿದೆ, ಅದನ್ನು ಪರಿಶೀಲಿಸಿಲಾಗಿ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಪ್ರಕರಣದ ಕಡತವನ್ನು ರಾಮನಗರ ಪುರ ಪೊಲೀಸ್‌ ಠಾಣೆಗೆ ಬೆಂಗಳೂರು ನಗರದ ಯಶವಂತಪುರ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಿದ್ದರು ಎಂಬುದಾಗಿತ್ತು.ಆ ಮೇರೆಗೆ ರಾಮನಗರ ಪುರ ಪೊಲೀಸ್ ಠಾಣೆಯವರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಮನೆಯೊಂದರಲ್ಲಿ 4.50 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ನಗರದ ಯಾರಬ್ ನಗರ 2ನೇ ಹಂತದಲ್ಲಿರುವ ಬಿಡಿ ಕಾಲೋನಿಯಲ್ಲಿ ನಡೆದಿದೆ.

ಬೆಂಗಳೂರಿನ ಯಶವಂತಪುರ ಅಂಬೇಡ್ಕರ್ ನಗರದ 6ನೇ ಕ್ರಾಸ್ ವಾಸಿ ವಸೀಂ ಖಾನ್ ಪತ್ನಿ ಫರ್ಹಾನ್ ತಾಜ್ ಎಂಬುವರು ಸುಮಾರು 365 ಗ್ರಾಂ ಚಿನ್ನಾಭರಣ ಕಳುವಾಗಿರುವ ಕುರಿತು ಬೆಂಗಳುರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ಪ್ರಕರಣ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಕಳೆದ ನ.29 ರಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ರಾಮನಗರ ಪುರ ಪೊಲೀಸ್ ಠಾಣೆಗೆ ಟಪಾಲ್ ಬಂದಿದೆ, ಅದನ್ನು ಪರಿಶೀಲಿಸಿಲಾಗಿ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಪ್ರಕರಣದ ಕಡತವನ್ನು ರಾಮನಗರ ಪುರ ಪೊಲೀಸ್‌ ಠಾಣೆಗೆ ಬೆಂಗಳೂರು ನಗರದ ಯಶವಂತಪುರ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಿದ್ದರು ಎಂಬುದಾಗಿತ್ತು.ಆ ಮೇರೆಗೆ ರಾಮನಗರ ಪುರ ಪೊಲೀಸ್ ಠಾಣೆಯವರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಅ.24ರಂದು ಫರ್ಹಾನ್ ತಾಜ್ ಕುಟುಂಬ ಸಮೇತ ರಾಮನಗರದ ಬೀಡಿ ಕಾಲೋನಿಯಲ್ಲಿ ವಾಸವಿರುವ ತಮ್ಮ ದೊಡ್ಡಮ್ಮನ ಮಗ ಮೋಸಿನ್ ಖಾನ್ ಮದುವೆಗೆ ಆಗಮಿಸಿದ್ದಾರೆ. ವಿವಾಹ ಮುಗಿಸಿಕೊಂಡು ಸಂಜೆ ಚಿಕ್ಕಮ್ಮ ಪರ್ವಿನ್ ರವರ ಮನೆಗೆ ಹೋಗಿದ್ದಾರೆ. ಈ ಸಮಯದಲ್ಲಿ ಚಿಕ್ಕಮ್ಮ ಪರ್ವಿನ್ , ಚಿಕ್ಕಪ್ಪ ಅಪ್ಸರ್ ,ಅವರ ಸ್ನೇಹಿತ ರಫೀಕ್ , ಚಿಕ್ಕಪ್ಪನ ಮೊದಲ ಪತ್ನಿ ತಾಸೀನ್‌ , ಅವರ ಮಕ್ಕಳಾದ ಸಿಮ್ರಾನ್ , ನಿಖ್ರತ್ ಇದ್ದರು. ಮನೆಯ ಕೊಠಡಿಯಲ್ಲಿ ಬಟ್ಟೆ ಚೇಂಜ್ ಮಾಡುವಾಗ ಫರ್ಹಾನ್ ತಾಜ್ ರವರು ಲಾಂಗ್ ಹಾರ, ತಾಳಿ, ಒಂದು ಜೊತೆ ಬಳೆ ಸೇರಿ 132 ಗ್ರಾಂ, ಸಾನಿಯಾರವರ ಪ್ಲೇನ್‌ ಚೈನ್ , ಪ್ಲೇನ್ ಹಾರ್ , ಪ್ರೇನ್ ತಾಳಿ, ಕಿವಿಯ ಓಲೆ, ಮಾಟ, ಉಂಗುರ ಸೇರಿ 120 ಗ್ರಾಂ ಹಾಗೂ ಫೌಜಿಯಾರವರ ಪ್ಲೇನ್ ಚೈನ್ , ಪ್ಲೇನ್ ಹಾರ, ಪ್ಲೇನ್ ತಾಳಿ , ಕಿವಿಯೋಲೆ ಸೇರಿ 113 ಗ್ರಾಂ ತೂಕದ ಚಿನ್ನಾಭರಣಗಳನ್ನು ತೆಗೆದು ಒಂದು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಕಿ ಪರ್ಸ್ ನೊಳಗೆ ಇಟ್ಟಿದ್ದಾರೆ. ಆ ಪರ್ಸ್ ಅನ್ನು ಮರೆತು ಅದೇ ದಿನ ರಾತ್ರಿ 8 ಗಂಟೆಗೆ ಮೂವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ನಂತರ ಚಿಕ್ಕಮ್ಮ ಪರ್ವಿನ್ ಮನೆಗೆ ವಾಪಸ್ ಹೋಗಿ ಕೇಳಿದಾಗ ಅವರು ಯಾವುದೇ ಪರ್ಸ್ ಇಲ್ಲವೆಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಫರ್ಹಾನ್ ತಾಜ್ ರವರು ಚಿಕ್ಕಮ್ಮ ಪರ್ವಿನ್ , ಚಿಕ್ಕಪ್ಪ ಅಪ್ಸರ್ , ಅವರ ಸ್ನೇಹಿತ ರಫೀಕ್ ಮೇಲೆ ಅನುಮಾನ ವ್ಯಕ್ತಪಡಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.