2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಪ್ರಮುಖ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನೀಡಿದ ಚುನಾವಣಾ ನಿಧಿಯ ಮಾಹಿತಿಯನ್ನು ಪಕ್ಷ ಬಹಿರಂಗಪಡಿಸಿದೆ.

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್‌ಬರೇಲಿಯಿಂದ ಸ್ಪರ್ಧಿಸಿದ ರಾಹುಲ್‌ ಗಾಂಧಿಗೆ ಪ್ರತಿ ಕ್ಷೇತ್ರಕ್ಕೆ ತಲಾ 70 ಲಕ್ಷ ರು. ಹಾಗೂ ಕರ್ನಾಟಕದ ಕಲಬುರಗಿ ಅಭ್ಯರ್ಥಿಯಾಗಿದ್ದ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿಗೂ 70 ಲಕ್ಷ ರು. ನೀಡಿರುವುದಾಗಿ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಸಂಸದೆ ಕಂಗನಾ ರಾಣಾವತ್‌ ವಿರುದ್ಧ ಮಂಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ವಿಕ್ರಮಾದಿತ್ಯ ಸಿಂಗ್‌ಗೆ ಪಕ್ಷದ ನಿಧಿಯಿಂದ ಅತಿ ಹೆಚ್ಚು (84 ಲಕ್ಷ ರು.) ಹಣ ನೀಡಲಾಗಿತ್ತು.

ಉಳಿದಂತೆ ಕಿಶೋರಿ ಲಾಲ್‌ ಶರ್ಮಾ, ಕೆ.ಸಿ.ವೇಣುಗೋಪಾಲ್‌, ಮಾಣಿಕ್ಯ ಟ್ಯಾಗೋರ್, ವಿಜಯ್‌ ಇಂದರ್‌ ಸಿಂಗ್ಲಾ ಅವರಿಗೂ 70 ಲಕ್ಷ ರು. ನೀಡಲಾಗಿತ್ತು. ಚುನಾವಣೆಯಲ್ಲಿ ಪರಾಜಿತರಾದ ಉಳಿದ ಅಭ್ಯರ್ಥಿಗಳಿಗೂ ಹಣ ನೀಡಲಾಗಿತ್ತು.