ನೀರಿನ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ : ಎಂ. ಮಲ್ಲೇಶ್ ಬಾಬು

| Published : Jun 18 2024, 12:59 AM IST / Updated: Jun 18 2024, 04:46 AM IST

ನೀರಿನ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ : ಎಂ. ಮಲ್ಲೇಶ್ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ರವರಿಗೆ ಕೃಷಿ ಮತ್ತು ನೀರಾವರಿ ಸಚಿವ ಸ್ಥಾನ ನೀಡುತ್ತಾರೆಂದು ಭರವಸೆ ಇತ್ತು, ನಮ್ಮ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹರಿಸಲು ಸಹಕಾರಿ ಆಗುತ್ತಿತ್ತು.

  ಶಿಡ್ಲಘಟ್ಟ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿರುದ್ಯೋಗ ನಿವಾರಣೆಗೆ ಮತ್ತು ನೀರಾವರಿ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ. ಮಲ್ಲೇಶ್ ಬಾಬು ಭರವಸೆ ನೀಡಿದರು.

ತಾಲೂಕಿನ ಶಾಸಕ ಬಿ.ಎನ್. ರವಿಕುಮಾರ್ ಅವರು ಮೇಲೂರು ಗ್ರಾಮದ ಸ್ವ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮಗೆ ನೀವು ನೀಡಿದ ಐದು ವರ್ಷ ಅಧಿಕಾರಾವಧಿಯನ್ನು ಸಂಪೂರ್ಣ ನಿಮ್ಮ ಸೇವೆಗೆ ಮೀಸಲಿಡುವುದಾಗಿ ಭರವಸೆ ನೀಡಿದರು. ಜನರ ಬೇಡಿಕೆ ಈಡೇರಿಸಲು ಯತ್ನ

ನಮ್ಮ ನಾಯಕರಾದ ಕುಮಾರಸ್ವಾಮಿ ರವರಿಗೆ ಕೃಷಿ ಮತ್ತು ನೀರಾವರಿ ಸಚಿವ ಸ್ಥಾನ ನೀಡುತ್ತಾರೆಂದು ಭರವಸೆ ಇತ್ತು, ನಮ್ಮ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹರಿಸಲು ಸಹಕಾರಿ ಆಗುತ್ತಿತ್ತು. ಆದರೆ ನರೇಂದ್ರ ಮೋದಿ ರವರ ಅಲೋಚನೆ ಏನಿತ್ತೋ ಬೃಹತ್ ಹಾಗೂ ಉಕ್ಕು ಕೈಗಾರಿಕಾ ಸಚಿವರನ್ನಾಗಿ ಮಾಡಿದ್ದಾರೆ. ಇದರ ಅವಕಾಶವನ್ನು ಉಪಯೋಗಿಸಿಕೊಂಡು ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳನ್ನು ಶಾಸಕರಾದ ರವಿ ಅಣ್ಣನವರ ಜೊತೆ ಚರ್ಚಿಸಿ ಕ್ಷೇತ್ರ ಅಭಿವೃದ್ಧಿಪಡಿಸಲು ಶ್ರಮಿಸುತ್ತೇವೆ ಎಂದರು. ನಮ್ಮ ವರಿಷ್ಠ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ರವರು ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದೇಗೆಲ್ಲಬೇಕೆಂದು ನನ್ನ ಮೇಲೆ ಭರವಸೆ ಇಟ್ಟಿದ್ದರು. ಅದರಂತೆ ನನಗೆ ಸಹಕಾರ ಕೊಟ್ಟ ಮಾತಿನಂತೆ ಈ ಬಾರಿ ಜಯಶೀಲರನ್ನಾಗಿ ಮಾಡಿದ ಎಂಟು ವಿಧಾನಸಭಾ ಕ್ಷೇತ್ರದ ಜನತೆಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು. ನೀರಾವರಿಗೆ ಆದ್ಯತೆ

ನಂತರ ಮಾತನಾಡಿದ ಶಾಸಕ ಬಿ. ಎನ್. ರವಿಕುಮಾರ್ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಿರುವುದು ಎರಡು ಬಾರಿ ಮಾತ್ರ ಮಲ್ಲೇಶ್ ಬಾಬು ಈಗ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ರಾಜ್ಯದಲ್ಲಿರುವ ನೀರಾವರಿ ಸಮಸ್ಯೆ ಮತ್ತು ರೈತರು ಅನುಭವಿಸುತ್ತಿರುವ ಕಷ್ಟಗಳನ್ನು ನಮ್ಮ ದೇವೇಗೌಡ ಅಪ್ಪಾಜಿಯವರು ಮತ್ತು ಕುಮಾರಣ್ಣನವರ ಆಶೀರ್ವಾದದಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅನುದಾನ ತಂದು ರಾಜ್ಯದ ಸಮಸ್ಯೆ ಗಳನ್ನು ಹಂತ ಹಂತವಾಗಿ ಪ್ರಾಮಾಣಿಕವಾಗಿ ಬಗೆಹರಿಸಿ ಎಲ್ಲಾ ರೀತಿಯ ಸೌಕರ್ಯಗಳನ್ನು ರಾಜ್ಯಕ್ಕೆ ನೀಡುವುದಾಗಿ ತೀರ್ಮಾನ ಮಾಡಿದ್ದೇವೆ ಎಂದರು ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಾರಾಯಣರಾವ್, ಸಂದೀಪ್, ಗಂಜಿಗುಂಟೆ ನರಸಿಂಹಮೂರ್ತಿ, ಲಕ್ಷ್ಮೀನಾರಾಯಣ್ ,ತಾದೂರು ರಘು ಉಪಸ್ಥಿತರಿದ್ದರು.