ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ

| Published : Nov 08 2023, 01:02 AM IST / Updated: Nov 08 2023, 01:03 AM IST

ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ದಲಿತ ಸ್ಮಶಾನದ ಜಾಗದಲ್ಲಿ ಕ್ವಾರಿ ತ್ಯಾಜ್ಯ ಸುರಿದಿದ್ದಾರೆ ಹಾಗೂ ಸ್ಮಶಾನದ ಬಳಿಯೇ ಗಣಿಗಾರಿಕೆ ನಡೆಯುತ್ತಿದೆ ಎಂದು ಎಸ್‌ಸಿ,ಎಸ್ಟಿ ಸಭೆಯಲ್ಲಿ ಬಂದ ದೂರಿನ ಹಿನ್ನಲೆ ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್‌ ಭೇಟಿ ಸಮಯದಲ್ಲಿ ದೂರು ನೀಡಿದ್ದ ಯುವಕನ ಮೇಲೆ ಗ್ರಾಮದ ಮತ್ತೊಂದು ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ದಲಿತರ ಸ್ಮಶಾನ ಜಾಗದಲ್ಲಿ ಅಕ್ರಮ ಗಣಿಗಾರಿಕೆ । ತಹಸೀಲ್ದಾರ್ ಜೊತೆ ಚರ್ಚೆಯಲ್ಲಿದ್ದ ಯುವಕನ ಮೇಲೆ ಹಲ್ಲೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ದಲಿತ ಸ್ಮಶಾನದ ಜಾಗದಲ್ಲಿ ಕ್ವಾರಿ ತ್ಯಾಜ್ಯ ಸುರಿದಿದ್ದಾರೆ ಹಾಗೂ ಸ್ಮಶಾನದ ಬಳಿಯೇ ಗಣಿಗಾರಿಕೆ ನಡೆಯುತ್ತಿದೆ ಎಂದು ಎಸ್‌ಸಿ,ಎಸ್ಟಿ ಸಭೆಯಲ್ಲಿ ಬಂದ ದೂರಿನ ಹಿನ್ನಲೆ ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್‌ ಭೇಟಿ ಸಮಯದಲ್ಲಿ ದೂರು ನೀಡಿದ್ದ ಯುವಕನ ಮೇಲೆ ಗ್ರಾಮದ ಮತ್ತೊಂದು ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹಿರೀಕಾಟಿ ಗ್ರಾಮದ ದಲಿತರ ಸ್ಮಶಾನದ ಬಳಿಗೆ ಹೋದಾಗ ಗ್ರಾಮದ ಯುವಕ ಶ್ರೀಧರ್‌ ಮತ್ತು ಸ್ನೇಹಿತ ಸ್ಮಶಾನದ ಚಿತ್ರಣ ತೋರಿಸುತ್ತಿದ್ದಾಗ ಶ್ರೀಧರ್‌ ಹಾಗೂ ಪ್ರಸನ್ನನ ನಡುವೆ ಮಾತಿನ ಚಕಮಕಿ ನಡೆದಿದೆ.

ದಲಿತರ ಸ್ಮಶಾನದ ಬಳಿ ಗಾಯತ್ರಿ ಪುಟ್ಟಣ್ಣ, ಗೀತಾ, ಗಣೇಶ್‌ ಗಣಿಗಾರಿಗೆ ಲೀಸ್‌ ಪಡೆದಿದ್ದು, ಸ್ಮಶಾನದ ಬಳಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಎಸ್‌ಸಿ,ಎಸ್‌ಟಿ ಸಭೆಯಲ್ಲಿ ದೂರು ಬಂದಿತ್ತು.

ಈ ಸಂಬಂಧ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಗ್ರಾಮದಿಂದ ವಾಪಸ್ಸಾದ ಬಳಿಕ ಪ್ರಸನ್ನ ಕಲ್ಲಿನಿಂದ ಶ್ರೀಧರ್‌ ಹಣೆ ಹೊಡೆದಿದ್ದು, ತಕ್ಷಣ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀಧರ್‌ ನಿಗೆ ಚಿಕಿತ್ಸೆ ನೀಡಲಾಗಿದೆ.

ಪೊಲೀಸರಿಗೆ ಹೇಳಿಕೆ ನೀಡಿದ ಶ್ರೀಧರ್, ದಲಿತರ ಸ್ಮಶಾನ ೧೯೯೭ ರಲ್ಲಿ ಮಂಜೂರಾಗಿದೆ.ಆದರೆ, ಈಗ ಸ್ಮಶಾನದ ಬಳಿಯೇ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಲ್ಲದೇ ಗಣಿಗಾರಿಕೆ ನಡೆಸುತ್ತಿದ್ದನ್ನು ತಹಸೀಲ್ದಾರ್‌ ಬಳಿ ಹೇಳುತ್ತಿದ್ದಾಗ ಗ್ರಾಮದ ಪ್ರಸನ್ನ,ಚಿನ್ನಯ್ಯ,ಗಂಗಾಧರ್‌,ರವಿ ಗಲಾಟೆ ಬಂದಿದ್ದು, ಪ್ರಸನ್ನ ಕಲ್ಲಿನಿಂದ ಹಣೆಗೆ ಹೊಡೆದಿದ್ದರಿಂದ ಹಣೆಯಿಂದ ತೀವ್ರ ರಕ್ತಸಾವ್ರವಾಗಿ ನನ್ನ ಅಣ್ಣ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರಿಗೆ ನಿಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಈ ಸಂಬಂಧ ಬೇಗೂರು ಠಾಣೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

---ಬಾಕ್ಸ್.......

ದೂರುದಾರನ ಮೇಲಿನ ಹಲ್ಲೆಗೆ ಖಂಡನೆ

ಗುಂಡ್ಲುಪೇಟೆ: ದಲಿತ ಸ್ಮಶಾನ ಸಂಬಂಧ ದೂರು ನೀಡಿದ ಯುವಕನ ಮೇಲೆ ಹಲ್ಲೆ ನಡೆಸಿರುವುದನ್ನು ರೈತ,ಕೂಲಿ ಸಂಗ್ರಾಮ ಸಮಿತಿ ಜಿಲ್ಲಾಧ್ಯಕ್ಷ ಕಂದೇಗಾಲ ಶಿವಣ್ಣ ಖಂಡಿಸಿದ್ದಾರೆ. ಕಳೆದ ೧೯೯೭ ರಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಜಾಗ ಮಂಜೂರಾಗಿದೆ.ಸ್ಮಶಾನದ ಜಾಗದ ಸುತ್ತ ೨೦೦ ಮೀಟರ್‌ ಬಿಟ್ಟು ಗಣಿಗಾರಿಕೆ ನಡೆಸಿಲ್ಲ.ಸ್ಮಶಾನದ ಬಳಿಯ ಬಂದು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.--೭ಜಿಪಿಟಿ೨ಹಲ್ಲೆಗೊಳಗಾದ ಹಿರೀಕಾಟಿ ಗ್ರಾಮದ ಶ್ರೀಧರ್‌, ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವುದು.