ಸಾರಾಂಶ
ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿರುವ ಜಾರಿ ನಿರ್ದೇಶನಾಲಯ, ಒಂದು ವೇಳೆ ಮುಖ್ಯಮಂತ್ರಿಯನ್ನು ಬಂಧಿಸಿದರೆ ಜೈಲಿನಲ್ಲೇ ಸಚಿವ ಸಂಪುಟ ಸಭೆ ನಡೆಸಿ, ಅಲ್ಲಿಂದಲೇ ಕಾರ್ಯನಿರ್ವಹಿಸುವ ‘ವರ್ಕ್ ಫ್ರಂ ಜೈಲ್’ ನಿರ್ಣಯವನ್ನು ಆಮ್‌ಆದ್ಮಿ ಪಕ್ಷ ತೆಗೆದುಕೊಂಡಿದೆ.
ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ
ಕೋರ್ಟಿಂದ ಅನುಮತಿ ಪಡೆಯಲೂ ಆಪ್ ಶಾಸಕರ ನಿರ್ಧಾರನವದೆಹಲಿ: ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿರುವ ಜಾರಿ ನಿರ್ದೇಶನಾಲಯ, ಒಂದು ವೇಳೆ ಮುಖ್ಯಮಂತ್ರಿಯನ್ನು ಬಂಧಿಸಿದರೆ ಜೈಲಿನಲ್ಲೇ ಸಚಿವ ಸಂಪುಟ ಸಭೆ ನಡೆಸಿ, ಅಲ್ಲಿಂದಲೇ ಕಾರ್ಯನಿರ್ವಹಿಸುವ ‘ವರ್ಕ್ ಫ್ರಂ ಜೈಲ್’ ನಿರ್ಣಯವನ್ನು ಆಮ್‌ಆದ್ಮಿ ಪಕ್ಷ ತೆಗೆದುಕೊಂಡಿದೆ.ಸಿಎಂ ಕೇಜ್ರಿವಾಲ್ ಸೋಮವಾರ ಇಲ್ಲಿ ಪಕ್ಷದ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಒಂದು ವೇಳೆ ಕೇಜ್ರಿವಾಲ್ ಮತ್ತು ಇತರೆ ಸಚಿವರನ್ನು ಬೇರೆ ಬೇರೆ ಪ್ರಕರಣದಲ್ಲಿ ಬಂಧಿಸಿದರೆ ಅವರು ಜೈಲಿನಿಂದಲೇ ಕಾರ್ಯನಿರ್ವಹಿಸುವ ನಿರ್ಧಾರವನ್ನು ಸಭೆ ತೆಗೆದುಕೊಂಡಿದೆ. ಜೊತೆಗೆ ಅಗತ್ಯಬಿದ್ದರೆ ಇದಕ್ಕೆ ನ್ಯಾಯಾಲಯದ ಅನುಮತಿ ಕೋರಲೂ ಸಭೆ ನಿರ್ಧರಿಸಿದೆ ಎಂದು ಸಭೆಯ ಬಳಿಕ ಸಚಿವ ಸೌರಭ್ ಭಾರಧ್ವಾಜ್ ಮಾಹಿತಿ ನೀಡಿದರು.ದೆಹಲಿಯಲ್ಲಿ ಅಧಿಕಾರ ಚಲಾಯಿಸುವ ಜನಮತವನ್ನು ದೆಹಲಿ ಜನರು ಕೇಜ್ರಿವಾಲ್‌ಗೆ ನೀಡಿದ್ದಾರೆ. ಹೀಗಾಗಿ ಬಂಧನವಾದರೂ ಅವರೇ ಹುದ್ದೆಯಲ್ಲಿ ಮುಂದುವರೆದು ಜೈಲಿನಿಂದಲೇ ಕಾರ್ಯನಿರ್ವಹಿಸಬೇಕು ಎಂಬುದು ಪಕ್ಷದ ನಿರ್ಧಾರ. ಅಗತ್ಯ ಕೆಲಸಗಳಿಗೆ ಅಧಿಕಾರಿಗಳು ಮತ್ತು ನಾವು ಜೈಲಿಗೆ ಹೋಗಲು ಸಿದ್ಧ ಎಂದು ಭಾರದ್ವಾಜ್ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))