18ನೇ ಲೋಕಸಭೆಗೆ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಂದಿನ ಕಾರ್ಯತಂತ್ರ ರಚನೆಗೆ ಬುಧವಾರ ಸಭೆ ಕರೆದಿವೆ.

18ನೇ ಲೋಕಸಭೆಗೆ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಂದಿನ ಕಾರ್ಯತಂತ್ರ ರಚನೆಗೆ ಬುಧವಾರ ಸಭೆ ಕರೆದಿವೆ.

ಸರಳ ಬಹುಮತ ಹೊಂದಿರುವ ಎನ್‌ಡಿಎ ಮೈತ್ರಿಕೂಟದ ಮುಖ್ಯಪಕ್ಷವಾದ ಬಿಜೆಪಿ, ತನ್ನ ಮಿತ್ರರನ್ನು ತನ್ನ ಬತ್ತಳಿಕೆಯಲ್ಲೇ ಹಿಡಿದಿಟ್ಟುಕೊಳ್ಳುವ ಸಲುವಾಗಿ ಮತ್ತು ಆದಷ್ಟು ಶೀಘ್ರ ಸರ್ಕಾರ ರಚಿಸುವ ಭಾಗವಾಗಿ ಬುಧವಾರ ಸಭೆ ಕರೆದಿದೆ.

ಇನ್ನೊಂದೆಡೆ ಎನ್‌ಡಿಎ ಕೂಟದ ಟಿಡಿಪಿ, ಜೆಡಿಯು ನಾಯಕರನ್ನು ಬುಧವಾರದ ಸಭೆಗೆ ಆಹ್ವಾನಿಸಿರುವ ಇಂಡಿಯಾ ಕೂಟ, ಸರ್ಕಾರ ರಚನೆಗೆ ಏನಾದರೂ ಸಾಧ್ಯತೆಗಳಿವೆಯೇ ಎಂಬುದನ್ನು ಪರಿಶೀಲಿಸುವ ಜೊತೆಗೆ ಮಿತ್ರಪಕ್ಷಗಳ ಒಗ್ಗಟ್ಟು ಯತ್ನ ಮಾಡಲು ಈ ಸಭೆ ಕರೆದಿದೆ.