ಸಾರಾಂಶ
ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್‌ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ವಿಡಿಯೋ ಮಾಡಿದ್ದ ಅಮೆರಿಕ ಪ್ರಜೆ ಇದೀಗ, ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹಂಚಿಕೊಂಡಿದ್ದಾರೆ.
ಬೆಂಗಳೂರು : ಇತ್ತೀಚೆಗೆ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್‌ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ವಿಡಿಯೋ ಮಾಡಿದ್ದ ಅಮೆರಿಕ ಪ್ರಜೆ ಇದೀಗ, ಈಜಿಪುರ ಫ್ಲೈಓವರ್ ಕಾಮಗಾರಿ ವಿಳಂಬದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹಂಚಿಕೊಂಡಿದ್ದಾರೆ.
ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ
ನಗರದಲ್ಲಿ ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಮಾಡಿರುವ ವಿಡಿಯೋದಲ್ಲಿ, ಈಜಿಪುರ ಫ್ಲೈಓವರ್ ಸುತ್ತಮುತ್ತಲಿನ ವ್ಯಾಪಾರಿಗಳು, ವಾಹನ ಸವಾರರು, ಸ್ಥಳೀಯರ ಅಭಿಪ್ರಾಯ ಪಡೆದಿದ್ದು, ಈ ವೇಳೆ, ಒಬ್ಬರು ಈಜೀಪುರ ಫ್ಲೈ ಓವರ್ ಕಾಮಗಾರಿ ಶುರುವಾಗುವುದಕ್ಕೆ ಮುಂಚೆ ತಮ್ಮ ಮಕ್ಕಳು ಡಿಗ್ರಿ ಮುಗಿಸಬಹುದು. ಮತ್ತೊಬ್ಬರು, ಮಂಗಳ ಗ್ರಹದ ಮೇಲೆ ಮನುಷ್ಯರು ನಡೆದಾಡುವ ಕಾಲಕ್ಕೆ ಕಾಮಗಾರಿ ಪೂರ್ಣಗೊಳ್ಳಬಹುದು. 2080ಕ್ಕೆ ಈಜೀಪುರ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಆರಂಭಗೊಳ್ಳಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಸಾರ್ವಜನಿಕರಿಗೆ ತೊಂದರೆ
ಕಾಮಗಾರಿ ಆರಂಭಗೊಂಡ ಬಳಿಕ ಸುತ್ತಮುತ್ತಲಿನ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
2017ರ ಮೇ 4ರಂದು ಆರಂಭವಾದ 2.5 ಕಿಮೀ ಉದ್ದದ ಈಜಿಪುರ ಫ್ಲೈಓವರ್ ಕಾಮಗಾರಿ ಆರಂಭಿಸಲಾಗಿತ್ತು. 2019ರ ನ. 4 ಕ್ಕೆ ಪೂರ್ಣಗೊಳ್ಳಬೇಕು. ಆದರೆ, ಕಾಮಗಾರಿ ಶುರುವಾಗಿ 8 ವರ್ಷ ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಭೂಸ್ವಾಧೀನ ಪ್ರಕ್ರಿಯೆ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಜುಲೈ ವೇಳೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.
;Resize=(690,390))

;Resize=(128,128))