ಸಾರಾಂಶ
ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರೋಬ್ಬರಿ 7.44 ಲಕ್ಷಗಳ ಮತಗಳ ಜಯ ಸಾಧಿಸಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕೆಲವು ನಾಯಕರು ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇಂದೋರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಸಿಂಗ್ ಲಾಲ್ವಾನಿಯಾ ಬರೋಬ್ಬರಿ 11.75 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಅತಿ ಹೆಚ್ಚಿನ ಅಂತರದಲ್ಲಿ ಗೆದ್ದಿರುವ ದಾಖಲೆ ಮಾಡಿದ್ದಾರೆ.
ಇನ್ನೂ ಅಸ್ಸಾಂನ ದುಬ್ರಿ ಕ್ಷೇತ್ರದಿಂದ ರಕಿಬುಲ್ ಹುಸೇನ್ 9.8 ಲಕ್ಷ ಮತಗಳ ಅಂತರದಿಂದ ಪ್ರತಿಸ್ಪರ್ಧಿ ವಿರುದ್ಧ ಜಯಭೇರಿ ಭಾರಿಸಿದ್ದಾರೆ. ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರೋಬ್ಬರಿ 7.44 ಲಕ್ಷಗಳ ಮತಗಳ ಜಯ ಸಾಧಿಸಿದ್ದಾರೆ.
ಕೋಲ್ಕತಾದಲ್ಲಿ ಹಲವು ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಡೈಮಂಡ್ ಹಾರ್ಬರ್ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್ ಬ್ಯಾನರ್ಜಿ 7 ಲಕ್ಷಗಳ ಅಂತರದಲ್ಲಿ ಗೆದ್ದಿದ್ದಾರೆ. ಟಿಎಂಸಿ ಜಾಯ್‌ನಗರದ ಅಭ್ಯರ್ಥಿ ಪ್ರತಿಮಾ ಮೊಂಡಾಲ್ 4 ಲಕ್ಷಕ್ಕೂ ಅಧಿಕ ಮತದಿಂದ ಜಯ ಸಾಧಿಸಿದ್ದಾರೆ.