ಆಂಧ್ರ ಗದ್ದುಗೆಗೆ ಜಗನ್‌ - ನಾಯ್ಡು ಪೈಪೋಟಿ

| Published : Jun 02 2024, 01:46 AM IST / Updated: Jun 02 2024, 04:16 AM IST

ಸಾರಾಂಶ

ಆಂಧ್ರ ಪ್ರದೇಶದಲ್ಲಿ 175 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಎನ್‌ಡಿಎ ಮೈತ್ರಿಕೂಟ ಹಾಗೂ ಹಾಲಿ ಅಧಿಕಾರದಲ್ಲಿರುವ ವೈಎಸ್‌ಆರ್‌ಸಿಪಿ ನಡುವೆ ತುರುಸಿನ ಪೈಪೋಟಿ ಏರ್ಪಡುವ ಲಕ್ಷಣಗಳು ಕಾಣಿಸಿವೆ.

ನವದೆಹಲಿ: ಆಂಧ್ರ ಪ್ರದೇಶದಲ್ಲಿ 175 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಎನ್‌ಡಿಎ ಮೈತ್ರಿಕೂಟ ಹಾಗೂ ಹಾಲಿ ಅಧಿಕಾರದಲ್ಲಿರುವ ವೈಎಸ್‌ಆರ್‌ಸಿಪಿ ನಡುವೆ ತುರುಸಿನ ಪೈಪೋಟಿ ಏರ್ಪಡುವ ಲಕ್ಷಣಗಳು ಕಾಣಿಸಿವೆ.

ಈ ಬಾರಿ ಆಂಧ್ರಪ್ರದೇಶದಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು, ನಟ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಾರ್ಟಿ ಮತ್ತು ಬಿಜೆಪಿ ಮೈತ್ರಿಕೂಟ ರಚಿಸಿಕೊಂಡಿದ್ದು, ಈ ಬಾರಿ ಅವರೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರುವುದಾಗಿ ನ್ಯೂಸ್‌ 18, ರೈಸ್‌ ಹಾಗೂ ಪೀಪಲ್ಸ್‌ ಪಲ್ಸ್‌ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮತ್ತೊಂದೆಡೆ ಹಾಲಿ ಅಧಿಕಾರದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷವು ಅಧಿಕಾರವನ್ನುಉಳಿಸಿಕೊಳ್ಳಲಿದೆ ಎಂಬುದಾಗಿ ಸಿ-ವೋಟರ್‌ ಹಾಗೂ ಆರಾ ಸಂಸ್ಥೆಗಳು ಸಮೀಕ್ಷೆಯಲ್ಲಿ ಪ್ರಕಟಿಸಿವೆ. ಇನ್ನು ಜಗನ್‌ ಸೋದರಿ ಶರ್ಮಿಳಾರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದ್ದ ಕಾಂಗ್ರೆಸ್‌ ಒಂದಂಕಿ ಇಲ್ಲವೇ ಶೂನ್ಯಕ್ಕೆ ಸೀಮಿತವಾಗುವ ಸಾಧ್ಯತೆಯಿದೆ.

ಹಾಲಿ ವಿಧಾನಸಭೆಯಲ್ಲಿ ವೈಎಸ್‌ಆರ್‌ಪಿಸಿ 151, ಟಿಡಿಪಿ 23, ಜನಸೇನಾ 1 ಸ್ಥಾನ ಹೊಂದಿವೆ.