ಪೆರಿಯಾರ್ ಅವರ ಇತಿಹಾಸದಲ್ಲಿ ಅನೇಕ ವೈರುಧ್ಯಗಳಿವೆ. ಮಹಿಳಾ ಸಬಲೀಕರಣ ಮತ್ತು ಜಾತಿ ನಿರ್ಮೂಲನೆಗೆ ಅವರು ನೀಡಿದ ಕೊಡುಗೆಗಳನ್ನು ಒಪ್ಪಿಕೊಳ್ಳುವಂತೆಯೇ, ಅವರ ನಾಸ್ತಿಕ ಹಾಗೂ ಬ್ರಾಹ್ಮಣ ವಿರೋಧಿ ಸಿದ್ಧಾಂತಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
-ಪೆರಿಯಾರ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದ ಅಣ್ಣಾಮಲೈ
-ಇದು ವಿವಾದವಾಗುತ್ತಿದ್ದಂತೆ ತಮ್ಮ ನಿಲುವಿನ ಬಗ್ಗೆ ಹೇಳಿಕೆಮದುರೈ: ದ್ರಾವಿಡ ಚಳವಳಿಯ ನೇತಾರ ಇ.ವಿ. ರಾಮಸಾಮಿ ಪೆರಿಯಾರ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದು ತೀವ್ರ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಪೆರಿಯಾರ್ ಅವರ ಇತಿಹಾಸದಲ್ಲಿ ಅನೇಕ ವೈರುಧ್ಯಗಳಿವೆ. ಮಹಿಳಾ ಸಬಲೀಕರಣ ಮತ್ತು ಜಾತಿ ನಿರ್ಮೂಲನೆಗೆ ಅವರು ನೀಡಿದ ಕೊಡುಗೆಗಳನ್ನು ಒಪ್ಪಿಕೊಳ್ಳುವಂತೆಯೇ, ಅವರ ನಾಸ್ತಿಕ ಹಾಗೂ ಬ್ರಾಹ್ಮಣ ವಿರೋಧಿ ಸಿದ್ಧಾಂತಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.ವೈಗೈ ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರನ್ನುದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ಪೆರಿಯಾರ್ ನಿಲುವುಗಳಲ್ಲಿ ವೈರುಧ್ಯವಿದೆ. ಅವರು 1935ರಲ್ಲಿ ಹಿಂದಿ ವಿರೋಧದ ಬಗ್ಗೆ ಮಾತನಾಡಿದ್ದರು. ಆದರೆ ಅದೇ ಪೆರಿಯಾರ್ 1965ರಲ್ಲಿ, ಹಿಂದಿಯನ್ನು ವಿರೋಧಿಸುವ ಯಾರನ್ನಾದರೂ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು. ಅವರು ಮಹಿಳಾ ವಿಮೋಚನೆ ಹಾಗೂ ಜಾತಿ ನಿರ್ಮೂಲನೆಯ ಪರವಾಗಿದ್ದರು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಅವರ ನಾಸ್ತಿಕ ಹಾಗೂ ಬ್ರಾಹ್ಮಣ-ವಿರೋಧಿ ನಿಲುವುಗಳನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.