10 ತಿಂಗಳಲ್ಲಿ ರಾಜ್ಯ ಸರ್ಕಾರದಿಂದ 600 ಕೋಟಿ ಅನುದಾನ : ನಂಜೇಗೌಡ

| Published : Apr 23 2024, 12:49 AM IST / Updated: Apr 23 2024, 04:40 AM IST

10 ತಿಂಗಳಲ್ಲಿ ರಾಜ್ಯ ಸರ್ಕಾರದಿಂದ 600 ಕೋಟಿ ಅನುದಾನ : ನಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಟೇಕಲ್‌ನ ಹುಣಸಿಕೋಟೆಯ ಪಟಾಲಮ್ಮನಗುಡಿ ಗುಡಿ ಸುತ್ತಮುತ್ತಲ ಗ್ರಾಮಗಳು ಕಲ್ಲನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಅವರಿಗೆ ಉತ್ತಮ ಸೌಕರ್ಯ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ.

 ಟೇಕಲ್ :  ಮಾಲೂರು ತಾಲೂಕಿನ ಅಭಿವೃದ್ಧಿಗೆ ಇನ್ನು 10 ತಿಂಗಳಲ್ಲಿ ರಾಜ್ಯ ಸರ್ಕಾರದಿಂದ 600 ಕೋಟಿ ಅನುದಾನ ತಂದು ಮಾದರಿ ತಾಲೂಕನ್ನಾಗಿ ಮಾಡುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಟೇಕಲ್‌ನ ಹುಣಸಿಕೋಟೆಯ ಪಟಾಲಮ್ಮನಗುಡಿ ಬಳಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್ ಪರ ಮತಯಾಚಿಸಿ ಮಾತನಾಡಿ, ಪಟಾಲಮ್ಮನ ಗುಡಿ ಸುತ್ತಮುತ್ತಲ ಗ್ರಾಮಗಳು ಕಲ್ಲನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಅವರಿಗೆ ಉತ್ತಮ ಸೌಕರ್ಯ ಹಾಗೂ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರವರ ಅಲೆ ಇದ್ದು ಕೋಲಾರದ ಅಭ್ಯರ್ಥಿ ಕೆ.ವಿ.ಗೌತಮ್ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದರು.

ಕಲ್ಲುಕುಟಿಕರಿಗೆ ನೆರವು: ಗೌತಮ್‌ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ನಮ್ಮ ತಾತ ಕೂಡ ಬೆಂಗಳೂರು ಗ್ರಾಮಾಂತರದಲ್ಲಿ ಕಲ್ಲು ಕ್ವಾರಿ ತೆಗೆದುಕೊಂಡು ವ್ಯಾಪಾರ ಮಾಡಿರುವುದು ನನಗೆ ಅನುಭವವಿದೆ. ಈ ನಿಟ್ಟಿನಲ್ಲಿ ನಾನು ನಿಮಗೂ ಕಲ್ಲುಕುಟಿಕರಿಗೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತೇನೆ. ಇದೆ 26 ರಂದು ಲೋಕಸಭಾ ಚುನಾವಣೆಯಲ್ಲಿ ಕ್ರಮಸಂಖ್ಯೆ 1 ಕ್ಕೆ ಮತ ನೀಡಿ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ತಾಪಂ ಮಾಜಿ ಸದಸ್ಯ ಬಿಜೆಪಿಯ ರಮೇಶ್‌ಗೌಡ ಮತ್ತು ಇತರ ಪಕ್ಷಗಳ ಮುಖಂಡರು ಶಾಸಕ ಕೆ.ವೈ.ನಂಜೇಗೌಡರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು. ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಶಾಸಕರು ಅವರಿಗೆ ಕಾಂಗ್ರೇಸ್ ಶಾಲೂ ಹಾಕಿ ಭಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾಜಿ ಶಾಸಕ ಎ.ನಾಗರಾಜ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಅಂಜನಿಸೋಮಣ್ಣ, ಕೆ.ಎಸ್.ವೆಂಕಟೇಶ, ಪ್ರಗತಿ ಶ್ರೀನಿವಾಸ, ವಿನೋದ್‌ಗೌಡ, ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಮಾಜಿ ಉಪಾಧ್ಯಕ್ಷ ಮಮತಶಶಿಧರ, ಬ್ಲಾಕ್ ಕಾಂಗ್ರೇಸ್ ವಿಜಯನರಸಿಂಹ, ಮತ್ತಿತರರು ಉಪಸ್ಥಿತರಿದ್ದರು.