ಸಾರಾಂಶ
ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿ ಜಾಮೀನು ಪಡೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಜನರು ದೊಡ್ಡ ಮದ್ಯದ ಬಾಟಲ್‌ನಂತೆ ಕಾಣುತ್ತಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿ ಜಾಮೀನು ಪಡೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಜನರು ದೊಡ್ಡ ಮದ್ಯದ ಬಾಟಲ್‌ನಂತೆ ಕಾಣುತ್ತಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿವರು,‘ಕೇಜ್ರಿವಾಲ್‌ರಿಗೆ ಅಬಕಾರಿ ಹಗರಣ ಒಂದು ಕಪ್ಪು ಚುಕ್ಕೆಯಾಗಿದೆ. ಇವರು ಎಲ್ಲೇ ಹೋದರು ಜನರು ಇವರನ್ನು ಮದ್ಯದ ಬಾಟಲಿನಂತೆ ಕಾಣುತ್ತಾರೆ. ಹೀಗಾಗಿ ಅವರು ಜಾಮೀನು ಪಡೆದು ಹೊರಬಂದರೂ ಆಪ್‌ಗೆ ಪ್ರಯೋಜನ ಆಗದು’ ಎಂದರು.
‘ಕೇಜ್ರಿವಾಲ್‌ರಿಗೆ ಸಿಕ್ಕಿರುವ ಕೇವಲ ಜಾಮೀನನ್ನು ಆಪ್ ದೊಡ್ಡ ಗೆಲುವೆಂದು ಪರಿಗಣಿಸಿದೆ. ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲಿಗೆ ಹೋಗಲೇ ಬೇಕು. ಆದರೆ ಕೇಜ್ರಿವಾಲ್ ಮಾತ್ರ ನನಗೆ ಹೆಚ್ಚು ಮತ ಸಿಕ್ಕರೆ ಮತ್ತೆ ಜೈಲಿಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಅತಿ ದೊಡ್ಡ ನ್ಯಾಯಾಂಗ ನಿಂದನೆ. ಕೇಜ್ರಿವಾಲ್‌ರಿಗೆ ಜಾಮೀನು ನೀಡಿದ ನ್ಯಾಯಾಧೀಶರು ಇದನ್ನೊಮ್ಮೆ ಗಮನಿಸಬೇಕು’ ಎಂದು ಅಮಿತ್ ಶಾ ಹೇಳಿದರು.