ಬೆಂಗಳೂರು ಭಾರಿ ದುಬಾರಿ... ಶೇಕಡ 40ರಷ್ಟು ಹೆಚ್ಚಿನ ಸಂಬಳಕ್ಕಾಗಿ ಪುಣೆ ಬಿಟ್ಟು ಬರಬಾರದಿತ್ತು : ಟೆಕಿ!

| N/A | Published : Mar 24 2025, 01:16 AM IST / Updated: Mar 24 2025, 04:06 AM IST

ಸಾರಾಂಶ

ಕಾರ್ಪೋರೆಟ್‌ ಉದ್ಯೋಗಿಯೊಬ್ಬರು ಶೇಕಡ 40ರಷ್ಟು ಹೆಚ್ಚಿನ ಸಂಬಳಕ್ಕಾಗಿ ಪುಣೆಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು, ಕೇವಲ ಒಂದೇ ವರ್ಷದಲ್ಲಿ ಬೆಂಗಳೂರಿನ ಜೀವನದಿಂದ ಬೇಸತ್ತಿದ್ದಾರಂತೆ. ಅವರ ಕಥೆಯನ್ನು ಸ್ನೇಹಿತರೊಬ್ಬರು ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಪುಣೆ: ಕಾರ್ಪೋರೆಟ್‌ ಉದ್ಯೋಗಿಯೊಬ್ಬರು ಶೇಕಡ 40ರಷ್ಟು ಹೆಚ್ಚಿನ ಸಂಬಳಕ್ಕಾಗಿ ಪುಣೆಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು, ಕೇವಲ ಒಂದೇ ವರ್ಷದಲ್ಲಿ ಬೆಂಗಳೂರಿನ ಜೀವನದಿಂದ ಬೇಸತ್ತಿದ್ದಾರಂತೆ. ಅವರ ಕಥೆಯನ್ನು ಸ್ನೇಹಿತರೊಬ್ಬರು ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

‘ಉದ್ಯೋಗಿಯೊಬ್ಬರು ವಾರ್ಷಿಕ ₹18 ಲಕ್ಷ ಸಂಬಳಕ್ಕೆ ಪುಣೆಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ಬೆಂಗಳೂರಿನಲ್ಲಿ ₹25 ಲಕ್ಷ ಸಂಬಳದ ಉದ್ಯೋಗ ಸಿಕ್ಕಿದ್ದರಿಂದ ಕಳೆದ ವರ್ಷ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಆದರೆ ಒಂದೇ ವರ್ಷದಲ್ಲಿ ಬೆಂಗಳೂರು ಜೀವನದಿಂದ ಬೇಸತ್ತಿದ್ದಾರೆ’ ಎಂದು ಲಿಂಕ್ಡ್‌ ಇನ್‌ನಲ್ಲಿ ಬರೆಯಲಾಗಿದೆ.

‘ನಾನು ಪುಣೆ ಬಿಟ್ಟು ಬರಬಾರದಿತ್ತು. ಬೆಂಗಳೂರು ಬಹಳ ದುಬಾರಿ. ಇಲ್ಲಿ ಮನೆ ಬಾಡಿಗೆ ವಿಪರೀತ ಹೆಚ್ಚು. ಜಿಪುಣ ಮನೆ ಮಾಲೀಕರು 3-4 ತಿಂಗಳ ಮುಂಗಡ ಕೇಳುತ್ತಾರೆ. ಟ್ರಾಫಿಕ್‌ ಕೆಟ್ಟದಾಗಿದ್ದು, ಪ್ರಯಾಣಕ್ಕೆ ತುಂಬಾ ವೆಚ್ಚವಾಗುತ್ತದೆ. ನಾನು ಪುಣೆಯ ₹15 ವಡಾ ಪಾವ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಲ್ಲಿ ಸಂಬಳ ಕಡಿಮೆಯಾದರೂ ಜೀವನ ಮತ್ತು ಉಳಿತಾಯ ಉತ್ತಮವಾಗಿತ್ತು’ ಎಂದಿದ್ದಾರೆ.

ತರಾವರಿ ಪ್ರತಿಕ್ರಿಯೆ:

ಇದನ್ನು ಅವರ ಸ್ನೇಹಿತ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ತರಾವರಿ ಪ್ರತಿಕ್ರಿಯೆಗಳು ಬಂದಿವೆ.

ಒಬ್ಬರು, ‘ನನಗೂ ಇದೇ ಅನುಭವವಾಗಿದೆ. 8 ವರ್ಷ ಪುಣೆಯಲ್ಲಿದ್ದೆ. ಆ ನಗರದಲ್ಲಿ ಒಳ್ಳೆಯ ವಾತಾವರಣ, ಕಡಿಮೆ ಖರ್ಚು ಮತ್ತು ಮನೆಯ ಭಾವನೆಯಿತ್ತು. ಆದರೆ ಬೆಂಗಳೂರು ಸಂಬಳವನ್ನೆಲ್ಲ ನುಂಗಿಹಾಕುತ್ತಿದೆ’ ಎಂದಿದ್ದಾರೆ.

ಇನ್ನೊಬ್ಬರು, ‘ನಾನು ಕಡಲೆಕಾಯಿಯಷ್ಟು ಸಂಪಾದಿಸುತ್ತಿದ್ದರೂ ಬೆಂಗಳೂರಿನಲ್ಲಿ ಸಂತೋಷವಾಗಿದ್ದೇನೆ. ಹಣ ನಿರ್ವಹಣೆಯನ್ನು ಕಲಿತುಕೊಳ್ಳದೆ ಬೆಂಗಳೂರನ್ನು ಟೀಕಿಸಬೇಡಿ’ ಎಂದಿದ್ದಾರೆ.