ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗದಲ್ಲಿ ಇಂದಿನಿಂದ ಐದು ದಿನ ನಾಟಕೋತ್ಸವ

| N/A | Published : Mar 24 2025, 01:19 AM IST / Updated: Mar 24 2025, 05:13 AM IST

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ಮಾರ್ಚ್‌ 24ರಿಂದ ಐದು ದಿನಗಳ ನಾಟಕೋತ್ಸವ ಆಯೋಜಿಸಿದೆ. ಸಾರ್ವಜನಿಕರು, ರಂಗಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಬೆಂಗಳೂರು :  ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ಮಾರ್ಚ್‌ 24ರಿಂದ ಐದು ದಿನಗಳ ನಾಟಕೋತ್ಸವ ಆಯೋಜಿಸಿದೆ. ಸಾರ್ವಜನಿಕರು, ರಂಗಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳುತ್ತವೆ. 24ರಂದು ಸಿಲ್ವರ್ ಬಾಕ್ಸ್, 25ಕ್ಕೆ ಶ್ರೀ ಕೃಷ್ಣ ಪಾರಿಜಾತ, ಕರ್ಣಾಂತರಂಗ, 26ರಂದು ದಾರಾಶಿಕೊ, 27ರಂದು ಗೋಕುಲ ನಿರ್ಗಮನ, 28ಕ್ಕೆ ಮಂಟೇಸ್ವಾಮಿ ಪ್ರಸಂಗ ನಾಟಕ ಪ್ರದರ್ಶನವಾಗುತ್ತದೆ.

ನಾಟಕೋತ್ಸವವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ। ಎಸ್.ಎಂ.ಜಯಕರ ಸೋಮವಾರ ಸಂಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೊಲ್ಲಹಳ್ಳಿ ಶಿವಪ್ರಸಾದ್, ಸಿಂಡಿಕೇಟ್ ಸದಸ್ಯರಾದ ಡಾ। ಕೆ.ಶರೀಫ, ಪ್ರೊ.ಸಿ.ಸೋಮಶೇಖರ್, ಡಾ। ಹಂಸಿನಿ ನಾಗೇಂದ್ರ, ಡಾ। ಶಿವಣ್ಣ ಭಾಗಿಯಾಗಲಿದ್ದಾರೆ ಎಂದು ಪ್ರದರ್ಶನ ಕಲಾ ವಿಭಾಗದ ಹಿರಿಯ ಮುಖ್ಯಸ್ಥ ಡಾ। ಕೆ.ರಾಮಕೃಷ್ಣಯ್ಯ ತಿಳಿಸಿದ್ದಾರೆ.