ಸಾರಾಂಶ
ಬೆಂಗಳೂರು : ಭಾರತದ ಅಗರಬತ್ತಿ ಉತ್ಪನ್ನಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕರಣ ಸಿಗುವುದರಿಂದ ಜಾಗತಿಕ ಮಟ್ಟದ ರಫ್ತು ಹೆಚ್ಚಲು ಕಾರಣವಾಗಲಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ಅರಮನೆ ಮೈದಾನದಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಆಯೋಜಿಸಿದ್ದ ಅಗರಬತ್ತಿ ಉದ್ಯಮದ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ ಎಐಎಎಂಎ ಎಕ್ಸ್‌ಪೋ 2025 ಅವರು ಉದ್ಘಾಟಿಸಿ, ಅಗರಬತ್ತಿಗಳಿಗೆ ಬಿಐಎಸ್ ಪ್ರಮಾಣೀಕರಣ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತೀಯ ಅಗರಬತ್ತಿ ಉದ್ಯಮವು ನಮ್ಮ ಸಂಸ್ಕೃತಿ ಮತ್ತು ಕುಶಲಕರ್ಮಿತನದ ಸಂಕೇತ
ಭಾರತೀಯ ಅಗರಬತ್ತಿ ಉದ್ಯಮವು ನಮ್ಮ ಸಂಸ್ಕೃತಿ ಮತ್ತು ಕುಶಲಕರ್ಮಿತನದ ಸಂಕೇತವಾಗಿದೆ. ಬಿಐಎಸ್ ಪ್ರಮಾಣೀಕರಣವನ್ನು ಅಗರಬತ್ತಿಗಳು ಪಡೆದುಕೊಂಡಲ್ಲಿ ಭಾರತೀಯ ಅಗರಬತ್ತಿ ಉತ್ಪನ್ನಗಳು ಜಾಗತಿಕ ಗುಣಮಟ್ಟ ಹೊಂದಿರುವುದು ಖಾತ್ರಿಯಾಗುತ್ತದೆ. ಇದರಿಂದ ನಮ್ಮ ರಫ್ತು ಪ್ರಮಾಣ ಹೆಚ್ಚಲಿದೆ ಮತ್ತು ಭಾರತ ಅಗರಬತ್ತಿ ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಲ್ಲಲು ನೆರವಾಗುತ್ತದೆ ಎಂದರು.
ಬಿಐಎಸ್ ಪ್ರಮಾಣೀಕರಣದ ಗೆಜೆಟ್ ನೋಟಿಫಿಕೆಶನ್
ಎಐಎಎಂಎ ಸಪ್ತಗಿರಿ ಎಸ್. ಬೊಗ್ಗರಾಮ್ ಮಾತನಾಡಿ, ಇದೇ ನ.3ರಂದು ಕೇಂದ್ರ ಸರ್ಕಾರ ಅಗರಬತ್ತಿ ಉದ್ಯಮಗಳು ಬಿಐಎಸ್ ಪ್ರಮಾಣೀಕರಣದ ಗೆಜೆಟ್ ನೋಟಿಫಿಕೆಶನ್ ಹೊರಡಿಸಿದೆ. ಅಗತ್ಯ ಮಾನದಂಡ ಹೊಂದಿದ್ದಲ್ಲಿ ಕಂಪನಿಗಳು ಬಿಐಎಸ್ ಪಡೆಯಬಹುದು. ಇದರಿಂದ ರಫ್ತಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಎಐಎಎಂಎ ಅಧ್ಯಕ್ಷ ಅಂಬಿಕಾ ರಾಮಾಂಜನೇಯುಲು, ಎಐಎಎಂಎ ಎಕ್ಸ್‌ಪೋ 2025ರ ಸಮಿತಿ ಅಧ್ಯಕ್ಷ ಮತ್ತು ಸೈಕಲ್ ಪ್ಯೂರ್ ಅಗರ್‌ಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗಾ ಮಾತನಾಡಿದರು.
ಪೌರಾಣಿಕ ತಜ್ಞ ದೇವದತ್ತ್ ಪಟ್ಟನಾಯಕ್ ಭಾರತೀಯ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯಲ್ಲಿ ಸುಗಂಧದ ಪಾತ್ರದ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಉದ್ಯೋಗ ಸೃಷ್ಟಿ, ಕಚ್ಚಾ ವಸ್ತುಗಳ ಮೂಲ, ಹೊಸ ಸುಗಂಧಗಳ ಸಂಶೋಧನೆ, ಪ್ಯಾಕೇಜಿಂಗ್ ಅಭಿವೃದ್ಧಿ, ಮಹಿಳಾ ಸಬಲೀಕರಣ, ರಫ್ತು ಅವಕಾಶಗಳು ಮತ್ತು ಹೊಸ ಯುಗದ ಮಾರ್ಕೆಟಿಂಗ್ ಇತರ ವಿಷಯಗಳ ಕುರಿತು ಗೋಷ್ಠಿ ನಡೆಯಿತು.
)
)

;Resize=(128,128))
;Resize=(128,128))
;Resize=(128,128))