ಸಾರಾಂಶ
ಸಂಡೂರು : ಸಂಡೂರು ಕ್ಷೇತ್ರದಲ್ಲಿ ಉಪ ಚುನಾವಣೆ ಕಣ ರಂಗೇರಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರ ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ಎಂಎಲ್‌ಸಿ ಸಿ.ಟಿ.ರವಿ ಅವರು ಪ್ರಚಾರ ಮಾಡಿದರು.
ತಾಲೂಕಿನ ಆರ್.ಮಲ್ಲಾಪುರ, ಯು.ರಾಜಾಪುರ, ಉಬ್ಬಲಗುಂಡಿ, ಮಾಳಾಪುರ, ಬನ್ನಿಹಟ್ಟಿ, ಗಂಗಲಾಪುರ, ನಾಗಲಾಪುರ, ತಾಳೂರು ಹಾಗೂ ಕುರೆಕುಪ್ಪ ಸೇರಿ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದ ಶ್ರೀರಾಮುಲು ಅವರು ಮಾತನಾಡಿ, ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರುವುದು ಖಚಿತ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಲೂಟಿ ಮಾಡಿದ್ದು, ಜನತೆ ಇದನ್ನು ಪ್ರಶ್ನಿಸಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಜನರು ಬಂಗಾರು ಹನುಮಂತು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಶಾಸಕ ಗಾಲಿ ಜನಾರ್ದನರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ, ಮಾಜಿ ಶಾಸಕ ತಿಪ್ಪೇಸ್ವಾಮಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್.ಸೋಮಪ್ಪ, ಇತರರು ಇದ್ದರು.
ಬಿಜೆಪಿ ಗೆದ್ದರೆ ವಿಜಯನಗರದ ವೈಭವ : ಕುರುಗೋಡು ತಾಲೂಕಿನ ಕುಡುತಿನಿಯಲ್ಲಿ ಪ್ರಚಾರ ಸಿ.ಟಿ.ರವಿ ಅವರು ಕೈಗೊಂಡರು. ಇವರಿಗೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡ್ ಸಾಥ್ ನೀಡಿದರು.
ಸಿ.ಟಿ.ರವಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿಜಯನಗರದ ವೈಭವ ಮರಳಲಿದೆ. ಕಾಂಗ್ರೆಸ್ ಗೆದ್ದರೆ ಬಿಜಾಪುರ ಆದಿಲ್ ಶಾಹಿಯ ಆಡಳಿತ ಬರಲಿದೆ. ಹಿಂದೂ ರೈತರ ಭೂಮಿಯನ್ನು ಮುಸ್ಲಿಂ ನಾಯಕರು ವಕ್ಫ್ ಬೋರ್ಡ್‌ಗೆ ಸೇರಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಬೆಂಬಲಿಸುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))