ಪ್ರಿಯಾಂಕಾ ವಿರುದ್ಧ ಕಣಕ್ಕಿಳಿಯಲು ವರುಣ್ ನಿರಾಕರಣೆ

| Published : Apr 26 2024, 12:46 AM IST / Updated: Apr 26 2024, 04:54 AM IST

Priyanka gandhi

ಸಾರಾಂಶ

ಕಾಂಗ್ರೆಸ್‌ ಭದ್ರಕೋಟೆಯಾದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ವಾದ್ರಾ ವಿರುದ್ಧ ಕಣಕ್ಕೆ ಇಳಿಯುವಂತೆ ತಮ್ಮ ಪಕ್ಷ ನೀಡಿದ್ದ ಸಲಹೆಯನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಕಾಂಗ್ರೆಸ್‌ ಭದ್ರಕೋಟೆಯಾದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾಂಕಾ ವಾದ್ರಾ ವಿರುದ್ಧ ಕಣಕ್ಕೆ ಇಳಿಯುವಂತೆ ತಮ್ಮ ಪಕ್ಷ ನೀಡಿದ್ದ ಸಲಹೆಯನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈ ಬಾರಿ ಪಿಲಿಬಿತ್ ಟಿಕೆಟ್‌ ಪಡೆಯುವುದರಿಂದ ವಂಚಿತರಾಗಿದ್ದ ವರುಣ್‌ರನ್ನು ಅವರ ಸೋದರಿ ಪ್ರಿಯಾಂಕಾ ವಿರುದ್ಧ ಕಣಕ್ಕೆ ಇಳಿಸಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಯೋಜಿಸಿತ್ತು. ಈ ಕುರಿತು ಬಿಜೆಪಿ ವರುಣ್‌ಗೆ ಪ್ರಸ್ತಾಪವನ್ನೂ ರವಾನಿಸಿತ್ತು. ಆದರೆ ಈ ಪ್ರಸ್ತಾಪ ತಿರಸ್ಕರಿಸಿರುವ ವರುಣ್‌ ಗಾಂಧಿ, ಈ ಬಾರಿ ಚುನಾವಣೆಯಿಂದಲೇ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

 ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದರು.