ಹರ್ಯಾಣ : ಚೌಟಾಲಾ ಪಕ್ಷವೇ ವಿಭಜನೆಯತ್ತ?

| Published : May 10 2024, 01:36 AM IST / Updated: May 10 2024, 04:31 AM IST

ಸಾರಾಂಶ

ಮುಖ್ಯಮಂತ್ರಿ ನಯಬ್‌ ಸಿಂಗ್‌ ಸೈನಿ ಸರ್ಕಾರದ ವಿಶ್ವಾಸಮತಕ್ಕೆ ಬೇಡಿಕೆ ಸಲ್ಲಿಸಿದ್ದ ದುಷ್ಯಂತ್‌ ಸಿಂಗ್‌ ಚೌಟಾಲಾ ನೇತೃತ್ವದ ಜೆಜೆಪಿ ಪಕ್ಷವೇ ಇದೀಗ ವಿಭಜನೆಯ ಭೀತಿ ಎದುರಿಸುವಂತಾಗಿದೆ.

ಚಂಡೀಗಢ: ಮುಖ್ಯಮಂತ್ರಿ ನಯಬ್‌ ಸಿಂಗ್‌ ಸೈನಿ ಸರ್ಕಾರದ ವಿಶ್ವಾಸಮತಕ್ಕೆ ಬೇಡಿಕೆ ಸಲ್ಲಿಸಿದ್ದ ದುಷ್ಯಂತ್‌ ಸಿಂಗ್‌ ಚೌಟಾಲಾ ನೇತೃತ್ವದ ಜೆಜೆಪಿ ಪಕ್ಷವೇ ಇದೀಗ ವಿಭಜನೆಯ ಭೀತಿ ಎದುರಿಸುವಂತಾಗಿದೆ. ಜೆಜೆಪಿಯ 10 ಶಾಸಕರ ಪೈಕಿ 6 ಜನರು ಈಗಾಗಲೇ ಚೌಟಾಲರಿಂದ ಅಂತರ ಕಾಯ್ದುಕೊಂಡಿದ್ದಾರೆ.

 ಜೊತೆಗೆ ಮೂವರು ಜೆಜೆಪಿ ಶಾಸಕರು ಗುರುವಾರ ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಅಗತ್ಯ ಬಿದ್ದರೆ ಬೆಂಬಲದ ನೆರವಿನ ಭರವಸೆ ಕೂಡಾ ನೀಡಿದ್ದಾರೆ ಎನ್ನಲಾಗಿದೆ.