1.80 ಕೋಟಿ ರು.ಗಳ ವೆಚ್ಚದಲ್ಲಿ ಬೆಳಗೇರಾ ಸೇತುವೆ ನಿರ್ಮಾಣ

| Published : Jul 04 2024, 01:05 AM IST / Updated: Jul 04 2024, 04:14 AM IST

ಸಾರಾಂಶ

ಬೆಳಗೇರಾ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಭತ್ತ ನಾಟಿ ಮಾಡುವ ಮೂಲಕ ನಡೆಸಿದ ವಿನೂತನ ಪ್ರತಿಭಟನೆಗೆ ಎಚ್ಚೆತ್ತು, ಈದೀಗ 1.80 ಲಕ್ಷ ರು.ಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹರ್ಷ ವ್ಯಕ್ತಪಡಿಸಿದ್ದಾರೆ.

 ಯಾದಗಿರಿ :  ಬೆಳಗೇರಾ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಭತ್ತ ನಾಟಿ ಮಾಡುವ ಮೂಲಕ ನಡೆಸಿದ ವಿನೂತನ ಪ್ರತಿಭಟನೆಗೆ ಎಚ್ಚೆತ್ತು, ಈದೀಗ 1.80 ಲಕ್ಷ ರು.ಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಹೊಸದಾಗಿ ನಿರ್ಮಿಸಿದ ಬೆಳಗೇರಾ ಸೇತುವೆಯನ್ನು ವೀಕ್ಷಿಸಿ ಮಾತನಾಡಿದ ಅವರು, ಈ ಸೇತುವೆಯಿಂದ ಕೇವಲ ಮುಂಡರಗಿ-ಬೆಳಗೇರಾ ಅಲ್ಲದೇ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಬಸ್ ಸಂಚಾರ ಬಂದಾಗಿತ್ತು. ಈದೀಗ ಬಸ್ ಸಂಚಾರವೂ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಸ್ಥಳದಲ್ಲಿಯೇ ತುನ್ನೂರು ಅವರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿ, ಸದ್ಯ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಬಾರ್ಡ್‌, ಕೆಕೆಆರ್‌ಡಿಬಿ ಇಲ್ಲವೇ ತಮ್ಮ ಶಾಸಕರ ಅನುದಾನದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳಗೇರಾ ಗ್ರಾಮಸ್ಥರಾದ ಆಂಜನೇಯ ನಾಯ್ಕೋಡಿ, ರಫೀಕ್ ಪಟೇಲ್, ಬಾಬುಖಾನ್, ಈರಪ್ಪ, ನಿಂಗಪ್ಪ ಮೋನಪ್ಪ ಸೇರಿದಂತೆ ಇತರರು ಇದ್ದರು.