'ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲಾಗದ ರಾಜ್ಯ ಸರ್ಕಾರ ಬಡವರಿಗೆ ನೀಡಿದ್ದ ಬಿಪಿಎಲ್‌ ಕಾರ್ಡ್‌ ರದ್ದು'

| Published : Nov 01 2024, 12:00 AM IST / Updated: Nov 01 2024, 04:58 AM IST

'ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲಾಗದ ರಾಜ್ಯ ಸರ್ಕಾರ ಬಡವರಿಗೆ ನೀಡಿದ್ದ ಬಿಪಿಎಲ್‌ ಕಾರ್ಡ್‌ ರದ್ದು'
Share this Article
  • FB
  • TW
  • Linkdin
  • Email

ಸಾರಾಂಶ

ಬಿಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ಐದು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇನ್ನುಳಿದ ಐದು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ನೀಡಬೇಕಿತ್ತು. ಆದರೆ ಐದುಕೆಜಿ ಅಕ್ಕಿ ಬದಲು ಕೆಜಿಗೆ 33 ರು.ಗಳಂತೆ ಹಣ ನೀಡುವುದಾಗಿ ತಿಳಿಸಿ ಈಗ ಏಕಾಏಕಿ ಸಾವಿರಾರು ಕಾರ್ಡ್‌ಗಳನ್ನೇ ರದ್ದುಮಾಡಿದೆ.

 ಚಿಕ್ಕಬಳ್ಳಾಪುರ : ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲಾಗದ ರಾಜ್ಯ ಸರ್ಕಾರ ಬಡವರಿಗೆ ವಿತರಿಸಿದ್ದ ಬಿಪಿಎಲ್ ಕಾರ್ಡ್‌ಗಳನ್ನು ರಾತ್ರೋರಾತ್ರಿ ರದ್ದುಗೊಳಿಸಿ, ಎಪಿಎಲ್ ಕಾರ್ಡ್ ಕೊಡಲಾಗಿದೆ. ಗ್ಯಾರೆಂಟಿಗಳನ್ನ ನಂಬಿ ಮತ ಹಾಕಿದ ಬಡವರು ಈಗ ಇದ್ದ ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವಂತಾಗಿದೆಯೆಂದು ಬಿಜೆಪಿ ನಗರ ಮಂಡಲಾಧ್ಯಕ್ಷ ಆನು ಆನಂದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಗಳಿಗೆ ಹಣ ಹೊಂದಿಸಲಾಗದೇ ಬಡವರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ. ಬಿಪಿಎಲ್ ಕಾರ್ಡ್ ದಾರರಲ್ಲಿ ಆದಾಯ ತೆರಿಗೆ ಪಾವತಿದಾರರಿದ್ದಲ್ಲಿ ಅಂತಹವರ ಕಾರ್ಡ್ ರದ್ದು ಮಾಡುವುದಕ್ಕೆ ನಮ್ಮ ಆಭ್ಯಂತರವಿಲ್ಲ. ಆದರೆ ಒಪ್ಪೋತ್ತಿನ ಕೂಳಿಗಾಗಿ ಕೂಲಿ ಕೆಲಸ ಮಾಡುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ರದ್ದು ಮಾಡಿದಂತಿದೆ ಎಂದರು.

ಸಾವಿರಾರು ಮಂದಿಯ ಕಾರ್ಡ್‌ ರದ್ದು

ಬಿಪಿಎಲ್ ಕಾರ್ಡ್ ದಾರರಲ್ಲಿ ಸರ್ಕಾರ ನೀಡುವ ಪಡಿತರವನ್ನೇ ನಂಬಿ ಜೀವನ ಸಾಗಿಸುವ ಹಲವಾರು ಕುಟುಂಭಗಳಿವೆ. ಅದಕ್ಕೆ ಕೇಂದ್ರಸರ್ಕಾರ ಐದು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇನ್ನುಳಿದ ಐದು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ನೀಡಬೇಕಿತ್ತು. ಆದರೆ ಐದುಕೆಜಿ ಅಕ್ಕಿ ಬದಲು ಕೆಜಿಗೆ 33 ರೂ ನಂತೆ ಹಣ ನೀಡುವುದಾಗಿ ತಿಳಿಸಿ ಈಗ ಏಕಾಏಕಿ ಸಾವಿರಾರು ಕಾರ್ಡ್ಗಳನ್ನು ರದ್ದುಮಾಡಿ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಹಣ ಸಿಗದಂತೆ ಮಾಡಿದೆ. ಜಿಲ್ಲೆಯಲ್ಲಿ ರದ್ದು ಮಾಡಿರುವ ಸಾವಿರಾರು ಬಡವರ ಬಿಪಿಎಲ್ ಕಾರ್ಡ್ ಗಳನ್ನು ಕೂಡಲೆ ಅರ್ಹರಿಗೆ ವಾಪಸ್‌ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಚಿಮುಲ್‌ ಸ್ಥಾಪನೆಗೆ ಸ್ವಾಗತಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ ನಿಂದ ಹಾಲು ಓಕ್ಕೂಟವನ್ನು ಬೇರ್ಪಡಿಸಿ ಚಿಮೂಲ್ ಮಾಡಿದ್ದರು. ಆದರೆ 17 ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರ್ಕಾರ ರದ್ದು ಮಾಡಿತ್ತು. ಮತ್ತೆ ಈಗ ಜಿಲ್ಲೆಗೆ ಪ್ರತ್ಯೇಕ ಹಾಲು ಓಕ್ಕೂಟಕ್ಕೆ ಸ್ಥಾಪನೆಗೆ ಉಚ್ಚನ್ಯಾಯಾಲಯ ತೀರ್ಪು ನೀಡಿದ್ದು ಸ್ವಾಗತಾರ್ಹ , ಜಿಲ್ಲೆಗೆ ಪ್ರತ್ಯೇಕ ಚಿಮೂಲ್ ಸ್ಥಾಪನೆಯಾಗಿರುವುದರಿಂದ ಜಿಲ್ಲೆಯ ಹೈನುಗಾರ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಂವಿದಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮಿಕಿ ಭವನ ನಿರ್ಮಿಸುವುದಾಗಿ ಉಸ್ತುವಾರಿ ಸಚಿವರು ಮಹರ್ಷಿ ವಾಲ್ಮಿಕಿ ಜಯಂತಿಯಲ್ಲಿ ಭರವಸೆ ನೀಡಿರುವುದು ಸ್ವಾಗತಾರ್ಹ, ಆದರೆ ಅದನ್ನು ಶೀಘ್ರವಾಗಿ ಕಾರ್ಯಗತ ಗೊಳಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ನಡೆಯುತ್ತಿ ರುವ 3 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವ ಖಚಿತ ಎಂದು ಅ‍ರು ಹೇಳಿದರು.