ಕೇಜ್ರಿ ನಿವಾಸದಲ್ಲಿ ಸ್ವಾತಿ ವಾಗ್ವಾದ: ವಿಡಿಯೋ ವೈರಲ್‌

| Published : May 18 2024, 12:30 AM IST / Updated: May 18 2024, 04:34 AM IST

ಕೇಜ್ರಿ ನಿವಾಸದಲ್ಲಿ ಸ್ವಾತಿ ವಾಗ್ವಾದ: ವಿಡಿಯೋ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಅವರು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಬೆದರಿಕೆ ಒಡ್ಡುತ್ತಿರುವಂತಹ ವಿಡಿಯೋ ವೈರಲ್‌ ಆಗಿದೆ. ಇದು ಸಿಎಂ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಅವರಿಂದ ಹಲ್ಲೆಗೊಳಗಾದ ನಂತರದ ವಿಡಿಯೋ ಎನ್ನಲಾಗಿದೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಅವರು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಬೆದರಿಕೆ ಒಡ್ಡುತ್ತಿರುವಂತಹ ವಿಡಿಯೋ ವೈರಲ್‌ ಆಗಿದೆ. ಇದು ಸಿಎಂ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಅವರಿಂದ ಹಲ್ಲೆಗೊಳಗಾದ ನಂತರದ ವಿಡಿಯೋ ಎನ್ನಲಾಗಿದೆ.

ಈ ಕುರಿತು 52 ಸೆಕೆಂಡ್‌ಗಳ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸ್ವಾತಿ ಮಲಿವಾಲ್‌ಗೆ ಭದ್ರತಾ ಸಿಬ್ಬಂದಿ ‘ಇಲ್ಲಿಂದ ಹೊರಡಿ’ ಎನ್ನುತ್ತಾರೆ. ಆಗ ಭದ್ರತಾ ಸಿಬ್ಬಂದಿಯ ಎದುರೇ ಪೊಲೀಸರಿಗೆ ಕರೆ ಮಾಡುವ ಸ್ವಾತಿ, ‘ಅವರು ಬರುವವರೆಗೆ ನಾನು ಇಲ್ಲಿಯೇ ಇರುವೆ’ ಎಂದು ತಿಳಿಸುತ್ತಾರೆ. ಅಲ್ಲದೆ ಯಾರಾದರೂ ತಮ್ಮನ್ನು ಮುಟ್ಟಿದಲ್ಲಿ ಡಿಸಿಪಿಗೆ ತಿಳಿಸುತ್ತೇನೆ ಎಂದು ಜೋರು ದನಿಯಲ್ಲಿ ಹೇಳುತ್ತಾರೆ.

ಸ್ವಾತಿ ತಿರುಗೇಟು:

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಾತಿ ಮಲಿವಾಲ್‌, ‘ಹಿಟ್‌ ಮ್ಯಾನ್‌ ಒಬ್ಬರು (ರಾಜಕೀಯ ನಾಯಕರೊಬ್ಬರು) ತಮ್ಮನ್ನು ಪ್ರಕರಣದಿಂದ ರಕ್ಷಿಸಿಕೊಳ್ಳಲು ಈ ರೀತಿ ನಕಲಿ ವಿಡಿಯೋ ಸೃಷ್ಟಿ ಮಾಡಿ ತಮ್ಮ ಬೆಂಬಲಿಗರ ಮೂಲಕ ವೈರಲ್‌ ಮಾಡಿಸಿದ್ದಾರೆ. ಆದರೆ ಸಿಸಿಟೀವಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ನಿಜಬಣ್ಣ ಬಯಲಾಗಲಿದೆ’ ಎಂದು ತಿರುಗೇಟು ನೀಡಿದ್ದಾರೆ.