ಸ್ವಚ್ಛ ಭಾರತದಿಂದ ಸ್ವಾವಲಂಬಿ ಭಾರತದತ್ತ: ಬಿಜೆಪಿಯ 10 ವರ್ಷಗಳ ಕಾರ್ಯಸಾಧನೆ - ಕೇಶವಪ್ರಸಾದ್

| Published : Oct 07 2024, 01:39 AM IST / Updated: Oct 07 2024, 04:47 AM IST

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಸ್ವಚ್ಛ ಭಾರತ್ ಮಿಷನ್‌ನಿಂದ ಹಿಡಿದು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವವರೆಗಿನ ವಿವಿಧ ಯೋಜನೆಗಳ ಕುರಿತು ಬೆಳಕು ಚೆಲ್ಲಲಾಗಿದೆ. 

 ಚಿಂತಾಮಣಿ : ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 10  ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಗಾಂಧೀಜಿ ಕಂಡ ಸ್ವಚ್ಛ ಭಾರತ್ ಕನಸನ್ನು ನನಸನ್ನಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ದೇಶದಾದ್ಯಂತ ಸ್ವಚ್ಛತೆಗೆ ಪಣತೊಟ್ಟಿದೆ. ಆದೇ ರೀತಿ ಬಯಲು ಬರ್ಹಿದೆಸೆ ಮುಕ್ತ ದೇಶದ ಮಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಲು ಸಹಾಯಧನ ನೀಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ ನುಡಿದರು.

ನಗರದ ಹೊರವಲಯದ ಬೂರಮಾಗಕಲಹಳ್ಳಿಯ ಮಾರುತಿ ಕಲ್ಯಾಣಮಂಟಪದಲ್ಲಿ ತಾಲೂಕು ಮಟ್ಟದ ಬಿಜೆಪಿ ಸದಸ್ಯತ್ವ ಸಭೆಯಲ್ಲಿ ಮಾತನಾಡಿ, ಚುನಾವಣೆ ಇದ್ದಾಗ ಜನರ ಬಳಿ ಹೋಗಿ ಚುನಾವಣಾ ಪ್ರಚಾರ ಮಾಡುವುದಲ್ಲ, ಬದಲಾಗಿ ಚುನಾವಣೆ ಇಲ್ಲದಿದ್ದಾಗ್ಯೂ ಜನರ ನಡುವೆ ಒಡನಾಟವನ್ನು ಹೊಂದಲು ಸಹಕಾರಿಯಾಗಿರುವುದೇ ಸದಸ್ಯತ್ವ ಅಭಿಯಾನದ ಉದ್ದೇಶ ಎಂದರು.

ಶೌಚಾಲಯ ನಿರ್ಮಾಣಕ್ಕೆ ನೆರವು

ಗ್ರಾಮೀಣ ಭಾಗದ ಮಹಿಳೆಯರು ಬರ್ಹಿದೆಸೆಗೆ ಸೂರ್ಯೋದಯಕ್ಕೆ ಮುಂಚೆ ಅಥವಾ ಸೂರ್ಯೋದಯದ ನಂತರ ಹೋಗುವ ದುಸ್ಥಿತಿ ಎದುರಾಗಿದ್ದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೧೧ ಕೋಟಿ ಶೌಚಾಲಯಗಳ ನಿರ್ಮಾಣ, ಬಡಕುಟುಂಬಗಳಿಗೆ ೧೨ ಕೋಟಿ ಉಜ್ವಲ್ ಯೋಜನೆಯಡಿಯಲ್ಲಿ ಅಡುಗೆ ಸಿಲೆಂಡರ್ ಪೂರೈಕೆ, ಜನತೆಗೆ ಬ್ಯಾಂಕಿನ ವ್ಯವಹಾರ ತಿಳಿಯಲು ಜನಧನ್ ಖಾತೆಯ ಯೋಜನೆ, ರೈತರಿಗೆ ಕಿಸಾನ್ ಸನ್ಮಾನ್ ಯೋಜನೆಯಡಿಯಲ್ಲಿ ಪ್ರತಿವರ್ಷ ೬ ಸಾವಿರ ರೂಪಾಯಿ ನೇರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಮುಖಂಡ ವೇಣುಗೋಪಾಲ್ ಪ್ರಾಸ್ತಾವಿಕ ನುಡಿ ಮಾತನಾಡಿ, ಪ್ರತಿಯೊಬ್ಬರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸಬೇಕು, ಈಗಾಗಲೇ ದೇಶದಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಬಿಜೆಪಿ ಪಕ್ಷವು ಶಿಸ್ತಿನ ಪಕ್ಷವೆಂದೇ ಹೆಸರಾಗಿದ್ದು ಸದಸ್ಯತ್ವ ಅಭಿಯಾನಕ್ಕೆ ಸಾಕಷ್ಟು ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ಕಾರ್ಯಕರ್ತರು ಮುಂದಾಗಬೇಕೆಂದು ಕರೆಯಿತ್ತರು.

ಸಣ್ಣ ವ್ಯಾಪಾರಿಗಳಿಗೆ ನೆರವು

ನಗರ ಭಾಗದ ಸಣ್ಣ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆ, ಯುವಕ ಯುವತಿಯರಿಗೆ ಸ್ಕೀಲ್ ಇಂಡಿಯಾ, ಸ್ಟಾಂಡ್ ಆಫ್ ಇಂಡಿಯಾ ಇತ್ಯಾದಿ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳು ನೆರವಾಗುತ್ತಿವೆಯೆಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ವೆಂಕಟಶಿವಾರೆಡ್ಡಿ, ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಬೈ, ಪ್ರಧಾನ ಕಾರ್ಯದರ್ಶಿಗಳಾದ ಸಿ.ಆರ್. ವೆಂಕಟೇಶ್, ಡಾಬಾಮಂಜುನಾಥ, ಶ್ರೀನಿವಾಸರೆಡ್ಡಿ, ಮಂಗಳಗೌರಿ, ಭಾಗ್ಯಮ್ಮ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.