ಮುಖಭಂಗ ನಂಗಲ್ಲ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಂದ ರೇವಣ್ಣ
Apr 30 2025, 12:35 AM ISTನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮುಖಭಂಗ ಹೊರತು ನನಗಲ್ಲ. ಜಿಲ್ಲೆಯಲ್ಲಿ ಬಿಜೆಪಿನಾ ಕಾಂಗ್ರೆಸ್ಗೆ ಅಡ ಇಟ್ಟಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಗುಡುಗಿದರು. ನಾನು ಮೂವತ್ತು ವರ್ಷ ರಾಜಕೀಯ ಮಾಡಿದ್ದೀನಿ, ಇಂತಹದ್ದನ್ನೆಲ್ಲಾ ನೋಡಿದ್ದೀನಿ, ನನಗೆ ರಾಜಕೀಯ ಹಿನ್ನಡೆಯಲ್ಲ ಇದು ಬುನಾದಿ. ಆ ಅಧ್ಯಕ್ಷನಿಗೆ ಮಾನ, ಮರ್ಯಾದೆ, ಗೌರವ ಇದೆಯಾ! ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೆದರಲ್ಲ ಎಂದು ಗುಡುಗಿದರು.