ಪಿಎಫ್‌ಐ ಬೇಕು, ಆರೆಸ್ಸೆಸ್‌ ಏಕೆ ಬೇಡ? : ಬಿಜೆಪಿ ಗರಂ

| N/A | Published : Nov 01 2025, 01:15 AM IST

BJP  flag

ಸಾರಾಂಶ

‘ಪಿಎಫ್‌ಐ, ಎಸ್‌ಡಿಪಿಐ ಮತ್ತು ಎಂಐಎಂನ ಗಲಭೆಕೋರರ ಜತೆ ನಿಲ್ಲುವ ಕಾಂಗ್ರೆಸ್ಸಿಗರು, ಆರೆಸ್ಸೆಸ್‌ ಮೇಲೆ ನಿಷೇಧ ಹೇರುವ ಆಗ್ರಹ ಮಾಡುವುದು ಸರಿಯೇ?’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

ನವದೆಹಲಿ: ‘ಪಿಎಫ್‌ಐ, ಎಸ್‌ಡಿಪಿಐ ಮತ್ತು ಎಂಐಎಂನ ಗಲಭೆಕೋರರ ಜತೆ ನಿಲ್ಲುವ ಕಾಂಗ್ರೆಸ್ಸಿಗರು, ಆರೆಸ್ಸೆಸ್‌ ಮೇಲೆ ನಿಷೇಧ ಹೇರುವ ಆಗ್ರಹ ಮಾಡುವುದು ಸರಿಯೇ?’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

ಭಾರತೀಯ ನಾಜಿ ಕಾಂಗ್ರೆಸ್‌

‘ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕು, ಸರ್ದಾರ್‌ ಪಟೇಲ್‌ ಅವರು ಕೂಡ ಇದೇ ನಿಲುವು ಹೊಂದಿದ್ದರು’ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಐಎನ್‌ಸಿ ಎಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಲ್ಲ. ಭಾರತೀಯ ನಾಜಿ ಕಾಂಗ್ರೆಸ್‌ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಆರ್‌ಎಸ್‌ಎಸ್‌ ರಾಜಕೀಯೇತರ ಸಂಘಟನೆಯಾಗಿದ್ದು, ಸರ್ಕಾರಿ ನೌಕರರು ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಯಾವ ಅಡ್ಡಿಯೂ ಇಲ್ಲ. ಆದರೆ ಕಾಂಗ್ರೆಸ್‌ಗೆ ಎಷ್ಟು ಅಸಹಿಷ್ಣುತೆ ಎಂದರೆ ಅವರು ಪಿಎಫ್‌ಐ, ಎಸ್‌ಡಿಪಿಐ ಮತ್ತು ಎಂಐಎಂನ ಗಲಭೆಕೋರರ ಜತೆ ನಿಲ್ಲುತ್ತಾರೆ. ಆದರೆ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಆರ್‌ಎಸ್‌ಎಸ್‌ ವಿರುದ್ಧ ವಿಷ ಕಾರುತ್ತಾರೆ. ನಿಷೇಧದ ಮಾತು ಆಡುತ್ತಾರೆ’ ಎಂದು ಹರಿಹಾಯ್ದರು.

ದಶಕಗಳಿಂದ ಪಟೇಲರನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್‌

ಅಲ್ಲದೆ, ‘ದಶಕಗಳಿಂದ ಪಟೇಲರನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್‌ಗೆ ಈಗ ಅವರ ನೆನಪಾಗುತ್ತಿದೆ. ಕಾಂಗ್ರೆಸ್‌ 50 ವರ್ಷಗಳಿಗೂ ಹೆಚ್ಚು ಕಾಲ ಪಟೇಲರನ್ನು ನಿರ್ಲಕ್ಷಿಸಿತ್ತು. ಎಂದಿಗೂ ಅವರ ಹೆಜ್ಜೆಗಳನ್ನು ಅನುಸರಿಸಲಿಲ್ಲ. ಆದರೆ ಈಗ ಆರ್‌ಎಸ್‌ಎಸ್‌ ವಿರೋಧಿಸಲು ಅವರ ಹೆಸರನ್ನು ಬಳಸುತ್ತಿದ್ದಾರೆ’ ಎಂದರು.

Read more Articles on