ಸಾರಾಂಶ
ಬಂಗಾರಪೇಟೆ : ರಾಜ್ಯ ಕಾಂಗ್ರೆಸ್ ಸರ್ಕಾರ ಹಲವು ಹರಗಣಗಳಲ್ಲಿ ಸಿಲುಕಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ಪತನವಾಗಬಹುದು. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಮಂದಿನ ಚುನಾವಣೆಗೆ ಈಗನಿಂದಲೇ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಸದಸ್ಯತ್ವ ಚುರುಕುಗೊಳಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಕೆಸಿಆರ್ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪರ್ಯಾಯ ನಾಯಕರಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಮುಡಾ ಹಗರಣದಲ್ಲಿ ಭಾಗಿಯಾಗಿರುವುದರಿಂದ ಅವರ ವಿರುದ್ದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ಅವರು ಯಾವುದೇ ಘಳಿಗೆಯಲ್ಲಿ ರಾಜೀನಾಮೆ ನೀಡಬಹುದು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಪರ್ಯಾಯ ನಾಯಕರಿಲ್ಲ. ಪಕ್ಷದ ಕಾರ್ಯಕರ್ತರು ಅವರನ್ನೇ ಅವಲಬಿಸುವಂತಾಗಿದೆ ಎಂದು ಟೀಕಿಸಿದರು.ಬಿಜೆಪಿ ಸದಸ್ಯತ್ವ ಅಭಿಯಾನ
ಈ ಹಿನ್ನೆಲೆಯಲ್ಲಿ ಚುನಾವಣೆ ಯಾವಾಗ ಬೇಕಾದರು ಬರಬಹುದು ಆದ್ದರಿಂದ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಟವಾಗಿ ಸಂಘಟನೆ ಮಾಡಿ ಈ ಬಾರಿ ಕ್ಷೇತ್ರದಲ್ಲಿ ಪಕ್ಷದ ಭಾವುಟ ಹಾರಿಸಲು ಕಾರ್ಯಕರ್ತರು ಕಂಕಣ ತೊಡಬೇಕು. ಪಕ್ಷ ಸಂಘಟನೆ ಹಾಗೂ ಅಸ್ತಿತ್ವಕ್ಕಾಗಿ ಸದಸ್ಯತ್ವ ಅಭಿಯಾನ ಅನಿವಾರ್ಯವಾಗಿದೆ ಎಂದರು.ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ. ಕೋಲಾರ ಎಂಪಿ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ.
ಮತ್ತೆ ಬಿಜೆಪಿ ತೆಕ್ಕೆಗೆ ಬರಬೇಕಾದರೆ ನಮ್ಮ ಶಕ್ತಿ ತೋರಿಸಬೇಕು, ಬರುವ ಜಿಪಂ ತಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮಾತ್ರ ಮುಂದೆ ಜಿಲ್ಲೆಯಲ್ಲಿ ಬಿಜೆಪಿ ಹವಾ ಹೆಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.ಈ ವೇಳೆ ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ,ಬಿ.ಪಿ.ವೆಂಕಟಮುನಿಯಪ್ಪ,ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ,ನಗರ ಅಧ್ಯಕ್ಷ ಬಿ.ಪಿ.ಮಹೇಶ್,ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್. ಮುಖಂಡರಾದ ನಾಗೇಶ್, ಹನುಮಪ್ಪ, ಸೀತಾರಾಮಪ್ಪ, ಮಾರ್ಕಂಡೇಗೌಡ, ಹುನ್ಕುಂದ ವೆಂಕಟೇಶ್, ಶಂಕರನಾರಾಯಣರೆಡ್ಡಿ, ಹೆಚ್.ಆರ್.ಶ್ರೀನಿವಾಸ್, ಬತ್ತಲಹಳ್ಳಿ ಮಂಜುನಾಥ್ ಇತರರು ಇದ್ದರು.