ಅಂಬೇಡ್ಕರ್‌ ನಾಮ ಜಪದಿಂದ ಮನುಸ್ಮೃತಿಗೆ ಮುಕ್ತಿ : ಶಾಸಕ ಎಸ್. ಎನ್ ನಾರಾಯಣಸ್ವಾಮಿ

| Published : Dec 20 2024, 12:46 AM IST / Updated: Dec 20 2024, 04:10 AM IST

ಸಾರಾಂಶ

ಅಮಿತ್ ಶಾ ಮಾನಸಿಕ ಅಸ್ವಸ್ಥರಾದಂತೆ ಕಾಣುತ್ತಿದೆ. ಅವರ ಮಾತು ಮತ್ತು ವರ್ತನೆ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು ಅವರಿಗೆ ಅಧಿಕಾರದ ಮದವೇರಿದೆ. ಮಿಸ್ಟರ್ ಅಮಿತ್ ಷಾ ಅವರೇ, ದೇವರ ನಾಮವನ್ನು ಜಪಿಸುವುದರಿಂದ ಯಾರಿಗೂ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ಎಲ್ಲರಿಗೂ ಗೋತ್ತಿದೆ.

  ಬಂಗಾರಪೇಟೆ : ಸಂಸತ್‌ನಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಗುರವಾಗಿ ಮಾತನಾಡಿದ್ದಾರೆಂದು ಖಂಡಿಸಿ ಪಟ್ಟಣದಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅಮಿತ್ ಶಾ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಶಾಸಕರು, ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಸಭೆಯಲ್ಲಿ ಹೇಳಿರುವುದು ಖಂಡನೀಯ ಎಂದರು.

ಶಾ ಮಾನಸಿಕ ಅಸ್ವಸ್ಥ

ಅಮಿತ್ ಶಾ ಮಾನಸಿಕ ಅಸ್ವಸ್ಥರಾದಂತೆ ಕಾಣುತ್ತಿದೆ. ಅವರ ಮಾತು ಮತ್ತು ವರ್ತನೆ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು ಅವರಿಗೆ ಅಧಿಕಾರದ ಮದವೇರಿದೆ. ಮಿಸ್ಟರ್ ಅಮಿತ್ ಷಾ ಅವರೇ, ದೇವರ ನಾಮವನ್ನು ಜಪಿಸುವುದರಿಂದ ಯಾರಿಗೂ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಈ ''''ಜನ್ಮದಲ್ಲಿಯೇ ಮುಖ್ಯವಾಗಿ ಬಾಬಾಸಾಹೇಬರ ನಾಮವನ್ನು ಜಪಿಸುವುದರಿಂದ ನಮಗೆ ಮನುಸ್ಮೃತಿಯಿಂದ ''''''''ಮುಕ್ತಿ'''''''' ದೊರಕುತ್ತದೆ ಎಂದರು. 

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ವಿ ನಾಗರಾಜ್, ಪಾರ್ಥಸಾರಥಿ ,ಚಂದು ಕುಮಾರ್,ಎ ಬಾಬು , ಪುರಸಭೆ ಸದಸ್ಯರಾದ ಷಂಶುದ್ದೀನ್ ಬಾಬು, ಹೆಚ್ ಕೆ ನಾರಾಯಣಸ್ವಾಮಿ,ಮುನಿರಾಜು ,ಎಸ್ ನಾರಾಯಣಗೌಡ ರಂಗರಾಮಯ್ಯ,ಅರುಣಾಚಲಂ ಮಣಿ, ಕುಪೇಂದ್ರ, ವಿವೇಕಾನಂದ, ಅಣ್ಣದೊರೈ, ರಾಕೇಶ್ ಗೌಡ, ಸಾಧಿಕ್, ,ಅ ನಾ ಹರೀಶ, ನವೀನ್ ಗೌಡ , ಇದ್ದರು.