ಸಾರಾಂಶ
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಭಾರತ್ ರಾಷ್ಟ್ರ ಸಮಿತಿ ಎಂಬ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿ ಎಂದು ಮತ್ತೆ ಬದಲಾಯಿಸಬೇಕು ಎಂಬ ಆಗ್ರಹಗಳು ಪಕ್ಷದಲ್ಲಿ ಹೆಚ್ಚಾಗಿವೆ.
ಸೋಲಿನ ಬಳಿಕ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲೇ ಈ ಆಗ್ರಹಗಳು ಕೇಳಿಬಂದಿವೆ.ಕಳೆದ ವರ್ಷ ರಾಷ್ಟ್ರಮಟ್ಟದಲ್ಲಿ ಪಕ್ಷ ಗುರುತಿಸಿಕೊಳ್ಳುವಂತಾಗಬೇಕು ಎಂಬ ಕಾರಣಕ್ಕೆ ಟಿಆರ್‌ಎಸ್ ಹೆಸರನ್ನು ಬಿಆರ್‌ಎಸ್ ಎಂದು ಬದಲಿಸಲಾಗಿತ್ತು.
ಪಕ್ಷದ ಹೆಸರಿನಿಂದ ತೆಲಂಗಾಣವನ್ನು ಕೈ ಬಿಟ್ಟ ಕಾರಣದಿಂದಲೇ ಪಕ್ಷ ವಿಧಾನಸಭೆಯಲ್ಲಿ ಸೋಲುವಂತಾಯಿತು ಎಂದು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಮೇಲೆ ಆಂತರಿಕ ಒತ್ತಡ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
‘ತೆಲಂಗಾಣದ ಹಿತಾಸಕ್ತಿಯ ಬಗ್ಗೆ ಯೋಚಿಸಲು ಇದ್ದ ಏಕೈಕ ಪಕ್ಷವೆಂದರೆ ಅದು ಟಿಆರ್‌ಎಸ್, ಆದರೆ ಪಕ್ಷದ ಹೆಸರನ್ನು ಬದಲು ಮಾಡಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದೇ ವಿಧಾನಸಭೆ ಸೋಲಿಗೆ ಕಾರಣ ಎಂದು ಪಕ್ಷದ ಹಲವು ನಾಯಕರು ಹೇಳುತ್ತಿದ್ದಾರೆ.
ಕೆ ಪಕ್ಷದ ಹೆಸರನ್ನು ಮತ್ತೆ ಟಿಆರ್‌ಎಸ್ ಎಂದು ಬದಲಾಯಿಸಬೇಕು ಎಂಬ ಆಗ್ರಹಗಳು ಪಕ್ಷದಲ್ಲಿ ಹೆಚ್ಚಾಗಿವೆ ಎಂದು ಹಿರಿಯ ನಾಯಕ ಕಡಿಯಾಮ್ ಶ್ರೀಹರಿ ಹೇಳಿದ್ದಾರೆ.