ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅನಂತ ಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ದರು. ಇಂಥವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಅನಂತ ಕುಮಾರ್ ಹೆಗಡೆಯವರ ಪ್ರಚೋದನಾಕಾರಿ ಹೇಳಿಕೆಗೆ ಸಂಬಂಧಿಸಿ ಶನಿವಾರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ಹೇಳಿಕೆ ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸಲು ಆಗುತ್ತಾ ಎಂದು ತಿರುಗೇಟು ನೀಡಿದರು.
ಇದೇ ವೇಳೆ ತಮ್ಮ ಕುರಿತು ಅವರು ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''''ಅವರ ಭಾಷೆ ಬಳಕೆ, ಅವರ ಮಾತು ಆ ರೀತಿ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ, ಕೊಡದೇ ಇರೋರು ಸಹ ಇದ್ದಾರೆ.
ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎಂದು ಹೇಳಲು ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೆಯೇ ಹೊರತು ನನಗಲ್ಲ'''' ಎಂದು ಹೇಳಿದರು.