ಸಾರಾಂಶ
2018 ರಲ್ಲಿ ನನ್ನ ಮೇಲೆ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತು ಕೇಸ್ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ.ನಂತರ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣ ಸಂಬಂಧ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಯಾರೇ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ
ಕೋಲಾರ : 2018 ರಲ್ಲಿ ನನ್ನ ಮೇಲೆ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತು ಕೇಸ್ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ. ನಂತರ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣ ಸಂಬಂಧ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಯಾರೇ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ನನ್ನ ಬಗ್ಗೆ ಪೂರ್ಣ ಮಾಹಿತಿ ಬೇಕೆಂದರೆ ನನ್ನ ಗ್ರಾಪಂಗೆ ಹೋಗಿ ಕೇಳಿದರೆ ಸಿಗುತ್ತದೆ. ನನ್ನ ತಂದೆ, ತಾಯಿ, ಹುಟ್ಟೂರು, ಅಜ್ಜ, ಅಜ್ಜಿ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ವಿಚಾರಣೆಗೆ ಸಹಕಾರ ನೀಡುತ್ತೇನೆ. ಸಮಸ್ಯೆ ಏನಾದರೂ ಇದ್ದಿದ್ದರೆ ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆನೆ ನಾನೇನು ಕೊಲೆ ಮಾಡಿದ್ದೇನೆಯೇ ಎಂದರು.
ರವಿ ಕೊಲೆಗೆ ಯಾರೂ ಯತ್ನಿಸಿಲ್ಲ
ಬಿಜೆಪಿಯವರು ಆರೋಪ ಮಾಡಿದಂತೆ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಯಾರೂ ಪ್ರಯತ್ನಿಸಿಲ್ಲ. ಕೊಲೆ ಮಾಡುವುದು ಎಂದರೆ ಏನು ದೇವಸ್ಥಾನದ ಮುಂದೆ ಕೋಳಿ, ಕುರಿ ಕುಯ್ಯುವುದೇ ಅಂದು ಬೆಳಗಾವಿಯಲ್ಲಿ ಅವರನ್ನು ಪೊಲೀಸರು ಹೊರಗಡೆ ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಒಂದು ವೇಳೆ ಆ ಸ್ಥಳದಲ್ಲಿದ್ದು, ಗಲಾಟೆ ಆಗಿದ್ದಾರೆ ಯಾರು ಜವಾಬ್ದಾರಿ ಆಗುತ್ತಿದ್ದರು ಎಂದು ಪ್ರಸ್ನಿಸಿದರು. ಶಾಸಕ ಮುನಿರತ್ನ ಮೇಲೆ ಯಾರೂ ಪುಂಡರು ಮೊಟ್ಟೆ ಎಸೆದಿರಬಹುದು.
ಕೊಲೆ ಮಾಡುವಂತಿದ್ದರೆ ಯಾರಾದರೂ ಹೇಳಿಕೊಂಡು ಬಂದು ಕೊಲೆ ಮಾಡುತ್ತಾರೆಯೇ. ಅದರಲ್ಲೂ ತಲೆ ಮಧ್ಯ ಭಾಗಕ್ಕೆ ಗುರಿ ಇಟ್ಟು ಮೊಟ್ಟೆ ಎಸೆದಿದ್ದಾರೆ. ಶಾರ್ಪ್ ಶೂಟರ್‌ಗಳಿಗೆ ಮಾತ್ರ ಅದು ಸಾಧ್ಯ. ನನ್ನ ಪ್ರಕಾರ ಮುನಿರತ್ನ ಅವರೇ ಹೇಳಿ ಮೊಟ್ಟೆ ಹೊಡೆಸಿಕೊಂಡಿರಬಹುದು. ಆಕಸ್ಮಾತ್ ಉದ್ದೇಶಪೂರ್ವಕವಾಗಿ ಎಸೆದಿದ್ದರೆ ತಪ್ಪು. ಹೀಗಾಗಿ, ತನಿಖೆ ನಡೆಸಿ ಕ್ರಮ ಆಗಬೇಕು ಎಂದರು.
ಹೆಚ್ಚುವರಿ ₹30ಕೋಟಿ ಅನುದಾನ ‘ರಸ್ತೆ ಅಭಿವೃದ್ಧಿಗೆಂದು ಕೋಲಾರಕ್ಕೆ 30 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಹಳ್ಳಿಗಳಲ್ಲೂ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಅಫ್ಸರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಕಿಲಾರಿಪೇಟೆ ಮಣಿ ಇದ್ದರು.