ರಾಯ್‌ ಬರೇಲಿ ಮತ್ತು ಅಮೇಠಿ ಸಂಸದೀಯ ಕ್ಷೇತ್ರಕ್ಕೆ ಕ್ರಮವಾಗಿ ಮಾಜಿ ಮುಖ್ಯಮಂತ್ರಿಗಳಾದ ಭೂಪೇಶ್‌ ಬಘೇಲ್‌ ಮತ್ತು ಅಶೋಕ್‌ ಗೆಹ್ಲೋಟ್‌ ಅವರನ್ನು ಹಿರಿಯ ವೀಕ್ಷಕರಾಗಿ ಕಾಂಗ್ರೆಸ್‌ ಸೋಮವಾರ ನೇಮಕ ಮಾಡಿದೆ.

ನವದೆಹಲಿ: ರಾಯ್‌ ಬರೇಲಿ ಮತ್ತು ಅಮೇಠಿ ಸಂಸದೀಯ ಕ್ಷೇತ್ರಕ್ಕೆ ಕ್ರಮವಾಗಿ ಮಾಜಿ ಮುಖ್ಯಮಂತ್ರಿಗಳಾದ ಭೂಪೇಶ್‌ ಬಘೇಲ್‌ ಮತ್ತು ಅಶೋಕ್‌ ಗೆಹ್ಲೋಟ್‌ ಅವರನ್ನು ಹಿರಿಯ ವೀಕ್ಷಕರಾಗಿ ಕಾಂಗ್ರೆಸ್‌ ಸೋಮವಾರ ನೇಮಕ ಮಾಡಿದೆ. 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸುವ ರಾಯ್‌ಬರೇಲಿ ಕ್ಷೇತ್ರದ ಬಗೆಗಿದ್ದ ಕುತೂಹಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ಬಘೇಲ್‌ರನ್ನು ನೇಮಿಸಲಾಗಿದೆ. ಗಾಂಧಿ ಕುಟುಂಬದ ಅತಿ ಆಪ್ತ ಸಹಾಯಕರಾದ ಕಿಶೋರಿ ಲಾಲ್‌ ಶರ್ಮಾ ಅಮೇಠಿಯಿಂದ ಕೇಂದ್ರ ಸಚಿವ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನೂ ಸವಾಲಾಗಿ ಪರಿಗಣಿಸಿ ಗೆಹ್ಲೋಟ್‌ರನ್ನು ಉಸ್ತುವಾರಿ ಮಾಡಲಾಗಿದೆ.