ಸಾರಾಂಶ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯನ್ನು ಆರಂಭಿಸಿರುವ ಕಾಂಗ್ರೆಸ್ ಪಕ್ಷ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿಗಳನ್ನು) ನೇಮಕ ಮಾಡಿದೆ,
ಕರ್ನಾಟಕದಲ್ಲಿ 28 ಲೋಕಸಭೆ ಕ್ಷೇತ್ರಗಳಿದ್ದು, ಕಾಂಗ್ರೆಸ್ ಈಗ ಕೇವಲ 1 ಸ್ಥಾನ ಹೊಂದಿದೆ. ಇದನ್ನು ಕನಿಷ್ಠ 20-25ಕ್ಕಾದರೂ ಹೆಚ್ಚಿಸಿಕೊಳ್ಳಬೇಕು ಎಂಬುದು ಆ ಪಕ್ಷದ ಪಣ. ಹೀಗಾಗಿ ಚುನಾವಣೆಗೆ ಇನ್ನು 4-5 ತಿಂಗಳು ಇದ್ದರೂ ಈಗಿಂದಲೇ ತಯಾರಿ ಆರಂಭಿಸಿ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಿಸಿದೆ. ಎಲ್ಲರೂ ಸಿದ್ದರಾಮಯ್ಯ ಮಂತ್ರಿಮಂಡಲದ ಸಚಿವರಾಗಿದ್ದು, ಅನೇಕರು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರೇ ಆಗಿದ್ದಾರೆ ಎಂಬುದು ಗಮನಾರ್ಹ.
ಈ ಉಸ್ತುವಾರಿಗಳು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಈಗಿನಿಂದಲೇ ಚುನಾವಣೆ ಪೂರ್ವಸಿದ್ಧತೆ ಆರಂಭಿಸಲಿದ್ದಾರೆ.
28 ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ:
ಚಿಕ್ಕೋಡಿ- ಎಚ್.ಕೆ.ಪಾಟೀಲ್,
ಬೆಳಗಾವಿ- ಸತೀಶ್ ಜಾರಕಿಹೊಳಿ,
ಬಾಗಲಕೋಟೆ- ಆರ್.ಬಿ. ತಿಮ್ಮಾಪುರ,
ವಿಜಯಪುರ (ಎಸ್‌ಸಿ)- ಎಂ.ಬಿ.ಪಾಟೀಲ್,
ಕಲಬುರಗಿ (ಎಸ್‌ಸಿ)- ಪ್ರಿಯಾಂಕ್ ಖರ್ಗೆ,
ರಾಯಚೂರು (ಎಸ್‌ಟಿ)- ಎನ್.ಎಸ್.ಬೋಸರಾಜು,
ಬೀದರ್- ಈಶ್ವರ್ ಖಂಡ್ರೆ,
ಕೊಪ್ಪಳ- ಶಿವರಾಜ ತಂಗಡಗಿ,
ಬಳ್ಳಾರಿ (ಎಸ್‌ಟಿ) - ಬಿ.ನಾಗೇಂದ್ರ,
ಹಾವೇರಿ - ಶಿವಾನಂದ ಪಾಟೀಲ್,
ಧಾರವಾಡ - ಸಂತೋಷ್ ಲಾಡ್,
ಉತ್ತರ ಕನ್ನಡ - ಮಾಂಕಾಳ ವೈದ್ಯ,
ದಾವಣಗೆರೆ- ಎಸ್.ಎಸ್.ಮಲ್ಲಿಕಾರ್ಜುನ,
ಶಿವಮೊಗ್ಗ- ಮಧು ಬಂಗಾರಪ್ಪ,
ಉಡುಪಿ, ಚಿಕ್ಕಮಗಳೂರು - ಕೆ.ಜೆ.ಜಾರ್ಜ್,
ಹಾಸನ- ಕೆ.ಎನ್.ರಾಜಣ್ಣ,
ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್,
ಚಿತ್ರದುರ್ಗ (ಎಸ್‌ಸಿ) - ಡಿ.ಸುಧಾರಕ್,
ತುಮಕೂರು- ಜಿ.ಪರಮೇಶ್ವರ,
ಮಂಡ್ಯ- ಚೆಲುವರಾಯಸ್ವಾಮಿ,
ಮೈಸೂರು- ಕೆ.ವೆಂಕಟೇಶ್,
ಚಾಮರಾಜನಗರ (ಎಸ್‌ಸಿ) - ಎಚ್.ಸಿ.ಮಹದೇವಪ್ಪ,
ಬೆಂಗಳೂರು ಗ್ರಾಮಾಂತರ - ಬಿ.ಎಸ್.ಸುರೇಶ್,
ಬೆಂಗಳೂರು ಉತ್ತರ - ಕೃಷ್ಣ ಭೈರೇಗೌಡ,
ಬೆಂಗಳೂರು ಕೇಂದ್ರ - ಜಮೀರ್ ಅಹ್ಮದ್ ಖಾನ್,
ಬೆಂಗಳೂರು ದಕ್ಷಿಣ - ರಾಮಲಿಂಗಾ ರೆಡ್ಡಿ,
ಚಿಕ್ಕಬಳ್ಳಾಪುರ- ಕೆ.ಎಚ್.ಮುನಿಯಪ್ಪ,
ಕೋಲಾರ(ಎಸ್‌ಸಿ) - ಎಂ.ಸಿ.ಸುಧಾಕರ್.