ಸಾರಾಂಶ
: ಮುಡಾ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ಮುಂದಾಗಿರುವ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ಗೆ ಭರ್ಜರಿ ತಿರುಗೇಟು ನೀಡಲು ಕಾಂಗ್ರೆಸ್ ಸಹ ಸಜ್ಜಾಗಿದೆ.
ಮೈಸೂರು : ಮುಡಾ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ಮುಂದಾಗಿರುವ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ಗೆ ಭರ್ಜರಿ ತಿರುಗೇಟು ನೀಡಲು ಕಾಂಗ್ರೆಸ್ ಸಹ ಸಜ್ಜಾಗಿದೆ. ಮೈಸೂರಿನ ಮುಡಾದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ನಡೆಸಿರುವ ಅಕ್ರಮಗಳನ್ನು ಪಾದಯಾತ್ರೆಯ ಹಾದಿಗುಂಟ ಬಿಚ್ಚಿಡುವ ಯೋಜನೆ ರೂಪಿಸಿದೆ.
ಹಂತ 1
ಬೆಂಗಳೂರಿಂದ ಬಿಜೆಪಿ ಪಾದಯಾತ್ರೆ ಆರಂಭಿಸುವ ದಿನ ಬೆಂಗಳೂರಿನಲ್ಲೇ ಬಿಜೆಪಿ ಮತ್ತು ಜೆಡಿಎಸ್‌ನ ‘ಮುಡಾ ಅಕ್ರಮಗಳ’ ಮೊದಲ ಕಂತು ಕಾಂಗ್ರೆಸ್‌ನಿಂದ ಬಹಿರಂಗ.
ಹಂತ 2
ಪಾದಯಾತ್ರೆ ಮೊದಲ ದಿನ ತಂಗುವ ಸ್ಥಳದಲ್ಲಿ ಮರುದಿನ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ, ಜೆಡಿಎಸ್‌ನವರ ‘ಮುಡಾ ಅಕ್ರಮಗಳ’ ಎರಡನೇ ಕಂತು ಕಾಂಗ್ರೆಸ್ಸಿಂದ ಬಹಿರಂಗ.
ಹಂತ 3
ಬಿಜೆಪಿಯವರ ಪಾದಯಾತ್ರೆ ಎಲ್ಲೆಲ್ಲಿ ತಂಗುವುದೋ ಅಲ್ಲೆಲ್ಲ ಕಾಂಗ್ರೆಸ್ ಮುಖಂಡರಿಂದ ಪತ್ರಿಕಾಗೋಷ್ಠಿ, ಪಾದಯಾತ್ರೆ ಹೋದಲ್ಲೆಲ್ಲ ಸಚಿವರು, ಪಕ್ಷದ ಮುಖಂಡರಿಂದ ವಾಗ್ದಾಳಿ.
ಹಂತ 4
ಪಾದಯಾತ್ರೆ ಮೈಸೂರು ಮುಟ್ಟಿದ ನಂತರ ಕಾಂಗ್ರೆಸ್‌ನಿಂದ ಮೈಸೂರಿನಲ್ಲಿ 1 ಲಕ್ಷ ಜನರ ಸೇರಿಸಿ ಬೃಹತ್ ಸಮಾವೇಶ. ಬಿಜೆಪಿ, ದಳದ ಇನ್ನಷ್ಟು ಕರ್ಮಕಾಂಡ ಬಹಿರಂಗಕ್ಕೆ ನಿರ್ಧಾರ.