ಕಾಂಗ್ರೆಸ್‌ ಅಪಪ್ರಚಾರವೇ ಜೆಡಿಎಸ್‌ಗೆ ಅಸ್ತ್ರ: ಎಂಎಲ್‌ಸಿ ಇಂಚರ ಗೋವಿಂದರಾಜು

| Published : Feb 11 2024, 01:48 AM IST / Updated: Feb 11 2024, 12:02 PM IST

ಇಂಚರ ಗೋವಿಂದರಾಜು
ಕಾಂಗ್ರೆಸ್‌ ಅಪಪ್ರಚಾರವೇ ಜೆಡಿಎಸ್‌ಗೆ ಅಸ್ತ್ರ: ಎಂಎಲ್‌ಸಿ ಇಂಚರ ಗೋವಿಂದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರಿಗೆ ಮಣೆ ಹಾಕುವುದು ಬೇಡ, ಸ್ಥಳೀಯರಿಗೆ ಆಧ್ಯತೆ ನೀಡಬೇಕೆಂಬುವುದು ಎಲ್ಲರ ಅಭಿಪ್ರಾಯ. ಆದರೆ ಮೈತ್ರಿ ಸರ್ಕಾರದಲ್ಲಿ ಯಾವುದೇ ಯಾರಿಗೆ ಟಿಕೆಟ್‌ ಸಿಗಲಿ ಎಲ್ಲರೂ ಸಂಘಟಿತರಾಗಿ ಗೆಲುವು ಸಾಧಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ಕಾಂಗ್ರೆಸ್‌ಗೆ ಚುನಾವಣೆಯ ಭೀತಿ ಉಂಟಾಗಿದ್ದು, ಜೆಡಿಎಸ್ ಶಾಸಕರ ವಿರುದ್ಧ ಅಪಪ್ರಚಾರದ ತಂತ್ರಗಾರಿಕೆ ಮಾಡುತ್ತಿದೆ. ಕಾಂಗ್ರೆಸ್ ಅಪಪ್ರಚಾರ ಮಡುತ್ತಿರುವುದನ್ನೇ ಜೆಡಿಎಸ್‌ ಒಂದು ಅಸ್ತ್ರವಾಗಿ ಬಳಸಿಕೊಂಡು ಚುನಾವಣಾ ಪ್ರಚಾರ ಆರಂಭಿಸಬೇಕು ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ಸಲಹೆ ನೀಡಿದರು.

ನಗರದ ಸಿ.ಎಂ.ಆರ್ ಗೃಹ ಕಚೇರಿಯ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅ‍ವರು, ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಸುತ್ತಿರುವುದರಿಂದ ಬಹುಮತ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಿ: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ, ಜೆಡಿಎಸ್ ಪ್ರಾದೇಶಿಕ ಪಕ್ಷ. ಈ ಹಿಂದೆ ೨೦೦೬ರಲ್ಲಿ ಇದೇ ಬಿಜೆಪಿಯೊಂದಿಗೆ ಜೆ.ಡಿ.ಎಸ್ ಪಕ್ಷವು ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರದ ಆಡಳಿತ ನಡೆಸಿತು.

ಆಗ ಕುಮಾರಸ್ವಾಮಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು ಇದರಿಂದ ಪಕ್ಷವು ಉಳಿದು ಬೆಳೆಯಲು ಪೂರಕವಾಯಿತು.

ಮೈತ್ರಿಯ ನಂತರ ಪಕ್ಷದಲ್ಲಿ ಹೊಂದಾಣಿಕ ಮಾಡಿಕೊಂಡು ಬೂತ್ ಮಟ್ಟದಿಂದ ಸಂಘಟಿಸುವುದು ಮುಖ್ಯವಾಗಿದೆ, ಕಳೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಿಂದ ಸಮಸ್ಯೆಯುಂಟಾಗಿತ್ತು ಎಂದರು.

ಮಾಲೂರಿನ ರಶ್ಮಿರಾಮೇಗೌಡರನ್ನು ಜೆ.ಡಿ.ಎಸ್ ರಾಜ್ಯ ಮಹಿಳಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸ್ವಾಗತಾರ್ಹ. 

ಲೋಕಸಭಾ ಚುನಾವಣೆಗೆ ಮುನ್ನವೇ ಮಹಿಳಾ ಸಂಘಟನೆಗೆ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ, ಇದರಿಂದ ಮಹಿಳೆಯರಲ್ಲೂ ಹುಮ್ಮಸ್ಸು ತುಂಬಿದಂತಾಗುವುದು, ಶೀಘ್ರದಲ್ಲಿ ಜೆ.ಡಿ.ಎಸ್ ಮಹಿಳೆಯರ ಜಿಲ್ಲಾಮಟ್ಟದ ಸಭೆ ಆಯೋಜಿಸುವಂತಾಗಬೇಕು ಎಂದರು.

ಸ್ಥಳೀಯರಿಗೇ ಟಿಕೆಟ್‌ ನೀಡಲಿ: ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾನಾಥ್‌ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಎಂ.ಮಲ್ಲೇಶ್, ಮುಳಬಾಗಿಲಿನ ಶಾಸಕ ಸಮೃದ್ದಿ ಮಂಜುನಾಥ್, ದೇವನಹಳ್ಳಿಯ ನಿಸರ್ಗ ನಾರಾಯಣಸ್ವಾಮಿ ಹಾಗೂ ಬಾಲಾಜಿ ಚೆನ್ನಯ್ಯ ಸೇರಿದಂತೆ ನಾಲ್ಕು ಮಂದಿ ಅಕಾಂಕ್ಷಿಗಳು ಇದ್ದಾರೆ.

ಹೊರಗಿನವರಿಗೆ ಮಣೆ ಹಾಕುವುದು ಬೇಡ ಸ್ಥಳೀಯರಿಗೆ ಆಧ್ಯತೆ ನೀಡಬೇಕೆಂಬುವುದು ಎಲ್ಲರ ಅಭಿಪ್ರಾಯ. ಆದರೆ ಮೈತ್ರಿ ಸರ್ಕಾರದಲ್ಲಿ ಯಾವುದೇ ಪಕ್ಷಕ್ಕೆ, ಯಾರಿಗೆ ಸಿಗಲಿ ಎಲ್ಲರೂ ಸಂಘಟಿತರಾಗಿ ಗೆಲುವು ಸಾಧಿಸುವಂತಾಗಬೇಕೆಂದು ಕರೆನೀಡಿದರು.

ಪಕ್ಷ ಸಂಘಟನೆಗೆ ಒತ್ತು: ಮುಂದಿನ ದಿನಗಳಲ್ಲಿ ಹೋಬಳಿವಾರು ಸಭೆಗಳನ್ನು ಆಯೋಜಿಸುವ ಮೂಲಕ ತಳಮಟ್ಟದಿಂದ ಪಕ್ಷ ಸಂಘಟಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು.

ಓರ್ವ ಎಂ.ಪಿ ಗೆದ್ದರೆ ೮ ವಿಧಾನಸಭಾ ಕ್ಷೇತ್ರವನ್ನು ಗೆದ್ದಂತೆ ಹಾಗೂ ಇಂದಿನಿಂದಲೇ ಪಕ್ಷದ ಸಂಘಟನೆಯ ಕಾರ್ಯಕ್ರಮ ರೂಪಿಸಿಕೊಂಡು ಎರಡು ತಿಂಗಳು ಶ್ರಮಪಟ್ಟರೆ ಸಾಕು ಮುಂದಿನ ೫ ವರ್ಷ ನಮ್ಮದೇ ಅಧಿಕಾರ ನಡೆಸಬಹುದಾಗಿದೆ ಎಂದರು.

ಲೋಕಸಭಾ ಅಕಾಂಕ್ಷಿ ಬಾಲಾಜಿ ಚೆನ್ನಯ್ಯ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ವಡಗೂರು ರಾಮು, ವಕ್ಕಲೇರಿ ರಾಮು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಯಲವಾರ ಸೊಣ್ಣೇಗೌಡ, ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್.

 ಮುಖಂಡರಾದ ತಿರುಮಲೇಶ್, ಮುದುವಾಡಿ ಮಂಜು, ವೆಂಕಟಚಲಪತಿ, ಟಮಕಾ ಶಬರೀಷ್, ಮಂಜುನಾಥ್, ಹೂವಳ್ಳಿ ನಾರಾಯಣಸ್ವಾಮಿ, ದಿಂಬ ನಾಗರಾಜ್, ಕುತುಬ್, ವಿಜಯಗೌಡ, ಚಂಬೇರಾಜೇಶ್, ಪುಷ್ಟಿ ನಾರಾಯಣಸ್ವಾಮಿ ಇದ್ದರು.