ಪೋಕ್ಸೋ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಶಾಸಕರಾದ ಸಿ.ಟಿ.ರವಿ, ರವಿಕುಮಾರ್‌ ಅವರು ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಶಾಸಕರಾದ ಸಿ.ಟಿ.ರವಿ, ರವಿಕುಮಾರ್‌ ಅವರು ಬೆಂಬಲ ಸೂಚಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣ, ಲೋಕಸಭಾ ಚುನಾವಣೆ ಬಳಿಕ ಹತಾಶೆಗೊಂಡಿರುವ ಕಾಂಗ್ರೆಸ್‌ ಸೇಡಿನ ರಾಜಕೀಯಕ್ಕಿಳಿದಿದೆ. ಪ್ರಕರಣದಲ್ಲಿ ಬಂಧಿಸಲೆತ್ನಿಸುವ ಮೂಲಕ ಯಡಿಯೂರಪ್ಪ ಅವರನ್ನು ಮಾನಸಿಕ ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕಿದೆ ಎಂದು ಕಿಡಿಕಾರಿದ್ದಾರೆ.

--

 ರಾಜಕೀಯ ಪ್ರೇರಿತ ಕೇಸ್‌ 

ಯಡಿಯೂರಪ್ಪ ಅವರ ಮೇಲೆ ದಾಖಲಾದ ಪೋಕ್ರೋ ಪ್ರಕರಣ ರಾಜಕೀಯ ಪ್ರೇರಿತವಾದುದು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚೇನೂ ಹೇಳಲಾರೆ. ಅವರು ಶೀಘ್ರ ಈ ಪ್ರಕರಣದಿಂದ ಹೊರಬರಲಿದ್ದಾರೆ.

- ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಸಂಸದ

--

ಬಿ ರಿಪೋರ್ಟ್‌ ಹಾಕುವ ಕೇಸ್‌ಇದು ಯಡಿಯೂರಪ್ಪ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ. ದೂರುದಾರ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಸ್ವತಃ ಗೃಹ ಸಚಿವ ಪರಮೇಶ್ವರ್ ಅವರೇ ಆಗ ಹೇಳಿದ್ದರು. ಬಿ ರಿಪೋರ್ಟ್ ಹಾಕುವಂತಹ ಪ್ರಕರಣವಿದು. ದುರುದ್ದೇಶದಿಂದ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ.

 ಬಿ.ವೈ.ರಾಘವೇಂದ್ರ, ಸಂಸದ

--

3 ತಿಂಗಳ ಬಳಿಕ ಕ್ರಮ ಏಕೆ?ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ಸಿಗರು ಹತಾಶೆಯಿಂದ ಸೇಡಿನ ರಾಜಕೀಯಕ್ಕೆ ಬಿಎಸ್‌ವೈ ಬಂಧಿಸಲು ಸಂಚು ನಡೆಸುತ್ತಿದ್ದಾರೆ. ಇಲ್ಲಿವರೆಗೂ ಮೌನವಾಗಿದ್ದು, 3 ತಿಂಗಳ ನಂತರ ಈ ಕ್ರಮ ಏಕೆ? ರಾಜಕೀಯ ದುರುದ್ದೇಶ, ಅತಿರೇಕದ ಈ ಕೇಸು ಕಾಂಗ್ರೆಸ್‌ಗೇ ತಿರುಗು ಬಾಣವಾಗುತ್ತದೆ.

-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ

--

ಇದು ಸುಳ್ಳು ಪ್ರಕರಣರಾಜಕೀಯ ಕಾರಣಕ್ಕೆ ಯಾವ್ಯಾವುದರಲ್ಲೋ ರಾಜಕೀಯ ಮಾಡುವುದು ಸರಿಯಲ್ಲ. ಮೂರು ತಿಂಗಳ ಹಿಂದೆ ದಾಖಲಾಗಿರುವ ಸುಳ್ಳು ಪ್ರಕರಣ ಇದು. ಚುನಾವಣೆ ಫಲಿತಾಂಶ ಬರುವವರೆಗೂ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಪ್ರಕರಣದ ಸತ್ಯಾಸತ್ಯತೆ ಎಲ್ಲವೂ ಗೊತ್ತಾಗಲಿದೆ.

-ಪಿ.ರಾಜೀವ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

--

 ಬಿಎಸ್‌ವೈ ವಿರುದ್ಧ ಷಡ್ಯಂತ್ರ

ಈ ಕೇಸಿನಲ್ಲಿ ಸತ್ಯ-ಸತ್ವ ಇಲ್ಲವೆಂದು ಸಾಬೀತಾಗಿದೆ. ರಾಹುಲ್ ಗಾಂಧಿಯವರು ಇಲ್ಲಿ ಬಂದು ಕೋರ್ಟ್ ಕಟೆಕಟೆಯಲ್ಲಿ ನಿಂತು ವಾಪಸ್ ಹೋದ ಬಳಿಕ ಇವರೆಲ್ಲರೂ ಬಿಜೆಪಿ ಮೇಲೆ ಮುಯ್ಯಿಗೆ ಮುಯ್ಯಿ ಎಂದು ಹಗೆತನ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಸುರ್ಜೇವಾಲಾ ಅವರ ಆದೇಶದಡಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿ ಈ ಷಡ್ಯಂತ್ರ ಮಾಡಿದ್ದಾರೆ.

 ಎನ್‌.ರವಿಕುಮಾರ್‌, ವಿಧಾನಪರಿಷತ್‌ ಬಿಜೆಪಿ ಮುಖ್ಯ ಸಚೇತಕ