ಸಾರಾಂಶ
ಇದು ಸಾಹು ಖಾಸಗಿ ವಿಷಯ, ಹಣಕ್ಕೂ ಪಕ್ಷಕ್ಕೂ ನಂಟಿಲ್ಲಆದರೆ ಕಾಂಗ್ರೆಸ್ ಸಂಸದ ಆಗಿರುವ ಕಾರಣ ಸ್ಪಷ್ಟನೆ ನೀಡಬೇಕುಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಸೂಚನೆ
ಪಿಟಿಐ ರಾಂಚಿ290 ಕೋಟಿ ರು.ಗೂ ಅಧಿಕ ನಗದು ಪತ್ತೆ ಆಗುವ ಮೂಲಕ ದೇಶದೆಲ್ಲೆಡೆ ಸುದ್ದಿ ಮಾಡಿರುವ ತನ್ನ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಂದ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ಬಯಸಿದೆ. ಆದಾಯ ತೆರಿಗೆ ಇಲಾಖೆ ಕಂಡು ಕೇಳರಿಯದಷ್ಟು ಹಣ ಜಪ್ತಿ ಮಾಡಿರುವ ಬಗ್ಗೆ ಸಾಹು ಮೌನ ಮುರಿಯಬೇಕು ಎಂದು ಸೂಚಿಸಿದೆ.‘ಸಾಹುಗೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ. ಹಣ ವಶದ ಬಗ್ಗೆ ಅವರನ್ನೇ ಕೇಳಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಶನಿವಾರ ಹೇಳಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ‘ಇದು ಸಾಹು ಅವರ ಖಾಸಗಿ ವಿಷಯ. ಪಕ್ಷಕ್ಕೂ ಅವರ ಹಣಕ್ಕೂ ಸಂಬಂಧ ಇಲ್ಲ. ಆದರೂ ಅವರು ಕಾಂಗ್ರೆಸ್ ಸಂಸದರಾಗಿರುವ ಕಾರಣ ತಮ್ಮ ಬಳಿ ಇಷ್ಟು ಹಣ ಹೇಗೆ ಬಂತು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.ಸಾಹು ಅವರ ಅಬಕಾರಿ ಕಂಪನಿಗಳು ಹಾಗೂ ಜಾರ್ಖಂಡ್, ಒಡಿಶಾದ ವಿವಿಧ ಆಸ್ತಿಗಳ ಮೇಲೆ 5 ದಿನದಿಂದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ. ಇಷ್ಟೊಂದು ಹಣ ಒಂದು ದಾಳಿಯಲ್ಲಿ ಸಿಕ್ಕಿದ್ದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.