ಕಾಲು ತೊಳೆಸಿಕೊಂಡ ಮಹಾ ಕಾಂಗ್ರೆಸ್ ಅಧ್ಯಕ್ಷ ಪಟೋಲೆ : ವಿವಾದ

| Published : Jun 19 2024, 01:04 AM IST

ಕಾಲು ತೊಳೆಸಿಕೊಂಡ ಮಹಾ ಕಾಂಗ್ರೆಸ್ ಅಧ್ಯಕ್ಷ ಪಟೋಲೆ : ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮವೊಂದರಲ್ಲಿ ಮಣ್ಣು ನೆಲದ ಮೇಲೆ ನಡೆದು ಬಂದಿದ್ದ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರ ಕಾಲುಗಳನ್ನು ಕಾರ್ಯಕರ್ತರೊಬ್ಬರು ನೀರಿನಿಂದ ತೊಳೆಯುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಭಾರೀ ವಿವಾದ ಸೃಷ್ಟಿಸಿದೆ.

ಮುಂಬೈ: ಕಾರ್ಯಕ್ರಮವೊಂದರಲ್ಲಿ ಮಣ್ಣು ನೆಲದ ಮೇಲೆ ನಡೆದು ಬಂದಿದ್ದ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರ ಕಾಲುಗಳನ್ನು ಕಾರ್ಯಕರ್ತರೊಬ್ಬರು ನೀರಿನಿಂದ ತೊಳೆಯುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಭಾರೀ ವಿವಾದ ಸೃಷ್ಟಿಸಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಸಮಜಾಯಿಷಿ ನೀಡಿರುವ ಪಟೋಲೆ, ತಾನು ಕಾಲು ತೊಳೆಯಲು ಕೇವಲ ನೀರನ್ನು ಮಾತ್ರ ಕೇಳಿದ್ದು, ನಮ್ಮ ಕಾರ್ಯಕರ್ತರು ಅಭಿಮಾನದಿಂದ ತನ್ನ ಕಾಲನ್ನು ತೊಳೆದ ಎಮದು ಸಮರ್ಥಿಸಿಕೊಂಡಿದ್ದಾರೆ. ಆದರೆ ವಿಡಿಯೋದಲ್ಲಿ ಕಾರ್ಯಕರ್ತ ಕಾಲು ತೊಳೆಯಲು ಬಂದರೂ ಆತನನ್ನು ಪಟೋಲೆ ತಡೆಯದಿದ್ದುದು ಸ್ಪಷ್ಟವಾಗಿ ಕಾಣಬಹುದಾಗಿದೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನದ್ದು ಗುಲಾಮಿ ಸಂಸ್ಕೃತಿಯಾಗಿದೆ. ತನ್ನ ಕಾರ್ಯಕರ್ತನಿಂದ ಕಾಲು ತೊಳೆಸಿಕೊಂಡ ನಾನಾ ಪಟೋಲೆ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಪತ್ನಿ ಸಾವಿನ ಬೆನ್ನಲ್ಲೇ ಅಸ್ಸಾಂ ಗೃಹ ಕಾರ್ಯದರ್ಶಿ ಆತ್ಮಹತ್ಯೆಗುವಾಹಟಿ: ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಅಸ್ಸಾಂನ ಗೃಹ ಕಾರ್ಯದರ್ಶಿ ಶೈಲಾದಿತ್ಯ ಚೇತಿಯಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೆದುಳಿನ ಸಮಸ್ಯೆಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ಮಂಗಳವಾರ ಐಸಿಯುನಲ್ಲಿ ಕೊನೆಯುಸಿರೆಳೆದಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅದೇ ಐಸಿಯುನಲ್ಲಿ ಚೇತಿಯಾ ತಮಗೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಚೇತಿಯಾ 2009ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಗೃಹ ಕಾರ್ಯದರ್ಶಿಯಾಗಿ ನೇಮಕವಾಗುವ ಮೊದಲು ತಿನ್ಸುಕಿಯಾ ಮತ್ತು ಸೋನಿಪತ್ ಎಸ್‌ಪಿಯಾಗಿ ಹಾಗೂ ಅಸ್ಸಾಂ ಪೋಲಿಸ್‌ನ 4ನೇ ಬೆಟಾಲಿಯನ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು.