ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರ ಹೆಚ್ಚಳ : ಮುನಿಸ್ವಾಮಿ

| Published : Apr 18 2024, 02:19 AM IST / Updated: Apr 18 2024, 05:11 AM IST

ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರ ಹೆಚ್ಚಳ : ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನದ ಗಣಿಗಳ ಚಿನ್ನ ಲೂಟಿ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ೩೦ ವರ್ಷಗಳ ಕಾಲ ಕೋಲಾರ ಜಿಲ್ಲೆಯನ್ನು ಆಳಿದ ಸಂಸದರು ಚಿನ್ನದ ಗಣಿಗಳ ಚಿನ್ನವನ್ನು ಲೂಟಿ ಮಾಡಿ ಚಿನ್ನದ ಗಣಿಗಳಿಗೆ ಬೀಗ ಜಡಿದು ಗಣಿಗಳಲ್ಲಿ ದುಡಿಯುವ ಕಾರ್ಮಿರನ್ನು ಬೀದಿಗೆ ತಳ್ಳಿದ್ದಾರೆ

 ಕೆಜಿಎಫ್ :  ಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್‍ಯಕರ್ತರು ಹಾಲು ಜೇನಿನಂತೆ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲವೆಂದು ಸಂಸದ ಮುನಿಸ್ವಾಮಿ ಹೇಳಿದರು.ಕ್ಯಾಸಂಬಳ್ಳಿಯ ಮಾಜಿ ಶಾಸಕ ಎಂ. ನಾರಾಯಸ್ವಾಮಿರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಯಾರು?

ನಮ್ಮ ಪ್ರಧಾನಿ ಅಭ್ಯರ್ಥಿ ಮೋದಿ ಎಂಬುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ಮೋದಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತಿದ್ದವೇ, ಕಾಂಗ್ರೆಸ್ ಪಕ್ಷದಲ್ಲಿ ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ಪ್ರಧಾನಿ ಅಭ್ಯಥೀ ಯಾರೆಂದು ಘೋಷಣೆ ಮಾಡಲಿ ಎಂದರು ಸವಾಲು ಹಾಕಿದರು. ಬಿಜೆಪಿ ಸರಕಾರ ೧೦ ವರ್ಷಗಳ ಸಾಧನೆ ಏನೆಂದು ನಾವು ಹೇಳುತ್ತಿದ್ದೇವೆ, ಆದರೆ ಯುಪಿಎ ಸರಕಾರದ ಅವಧಿಯಲ್ಲಿನ ಅಭಿವೃದ್ದಿ ಬಗ್ಗೆ ಚಕಾರವೆತ್ತುತ್ತಿಲ್ಲ, ದೇಶದ ಭಿವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಮತ ಹಾಕಬೇಕು, ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರಕ್ಕೆ ಸಮಾನ. ಪಾತಾಳದಿಂದ ಆಕಾಶದವರೆಗೆ ಭ್ರಷ್ಟಾಚಾರ ತುಂಬಿಕೊಂಡಿದೆ. ಅವರ ಪಕ್ಷದ ಅನೇಕರು ಈಗಾಗಲೇ ಜೈಲಿನಲ್ಲಿದ್ದಾರೆ, ಇನ್ನು ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‌ ಒಡೆದ ಮನೆ

ಕೋಲಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು ಆಗಿದೆ. ರಮೇಶ್‌ಕುಮಾರ್ ಹಾಗೂ ಕೆ.ಎಸ್.ಮುನಿಯಪ್ಪರ ನಡುವೆ ಅಲ್ಲಲ್ಲಿ ಸಿದ್ದರಾಮಯ್ಯರ ಗುಂಪೂ ಕಾಣುತ್ತಿದೆ ಎರಡೂ ಬಣ ಹಳಿ ತಪ್ಪಿದ್ದು ಅಭ್ಯರ್ಥಿಯಾಗಿ ಹೊರಗಿನ ವ್ಯಕ್ತಿ ಮೂರನೇ ಬಾಗಿಲಿಂದ ಬಂದಿದ್ದಾರೆ ಎಂದು ವ್ಯಂಗವಾಡಿದರು.ಚಿನ್ನದ ಗಣಿಗಳ ಚಿನ್ನ ಲೂಟಿ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ೩೦ ವರ್ಷಗಳ ಕಾಲ ಕೋಲಾರ ಜಿಲ್ಲೆಯನ್ನು ಆಳಿದ ಸಂಸದರು ಚಿನ್ನದ ಗಣಿಗಳ ಚಿನ್ನವನ್ನು ಲೂಟಿ ಮಾಡಿ ಚಿನ್ನದ ಗಣಿಗಳಿಗೆ ಬೀಗ ಜಡಿದು ಗಣಿಗಳಲ್ಲಿ ದುಡಿಯುವ ಕಾರ್ಮಿರನ್ನು ಬೀದಿಗೆ ತಳ್ಳಿದ್ದರು, ನಾನು ಸಂಸದ ಆದ ಮೇಲೆ ೨೮೦೦ ಕಾರ್ಮಿಕರಿಗೆ ಮನೆಯ ಹಕ್ಕು ಪತ್ರವನ್ನು ನೀಡಿರುವುದಾಗಿ ತಿಳಿಸಿದರು.ನಾವು ಗ್ಯಾರಂಟಿ ವಿರೋಧಿಯಲ್ಲ

ಕೋಲಾರ ಜಿಲ್ಲೆಯ ಚುನಾವಣೆ ಉಸ್ತುವಾರಿಯಾದ ಗೀತಾ ವಿವೇಕಾನಂದ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಗ್ಯಾರಂಟಿ ವಿರೋಧಿಯಲ್ಲ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದು ಕಿ.ಮೀ.ನಷ್ಟೂ ಅಭಿವೃದ್ದಿ ಮಾಡಿಲ್ಲ. ಕುಡಿಯುವ ನೀರಿನ ಯೋಜನೆ ಜಾರಿ ಮಾಡಿಲ್ಲ, ರಾಜ್ಯ ಸರಕಾರ ದಿವಾಳಿಯಾಗಿದೆ ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಘೋಷಿಸಿ ಒಂದು ಲಕ್ಷ ಕೊಡುವುದಾಗಿ ಹೇಳಿದ್ದಾರೆ. 100 ಕೋಟಿ ಜನರಿಗೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ಅಜೆಂಡಾ ಇಲ್ಲವೇ ಇಲ್ಲ ದೇಶವನ್ನು ಜಗತ್ತೀನ ಮುಂಚೂಣಿ ರಾಷ್ಟ್ರೀವನ್ನಾಗಿಸಬೇಕಿದೆ, ಮತ್ತೊಮ್ಮೆ ಮೋದಿ ಪ್ರದಾನಿಯಾಗಲು ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಮೋದಿ ಮತ್ತೆ ಪಿಎಂ ಆಗಬೇಕು

ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಮಾಡಿದ ಕೀರ್ತಿ ನರೇಂದ್ರ ಮೋದಿಗೆ ಸಲ್ಲುತ್ತದೆ, ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಮೊತ್ತಮ್ಮೆ ಬರಲು ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಯಾದ ನನಗೆ ಮತವನ್ನು ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರಲ್ಲಿ ಮನವಿ ಮಾಡಿದರು.ಮುಖಂಡರಾದ ಸುರೇಶ್ ನಾರಾಯಣ್‌ಕುಟ್ಟಿ, ಕೆ.ರಾಜೇಂದ್ರನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಮಲ್‌ನಾಥ್, ಜಯಪ್ರಕಾಶ್ ನಾಯ್ಡು, ನವೀನ್‌ರಾಮ್ ಇದ್ದರು.