ಸಾರಾಂಶ
ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದ್ದ 5 ಚುನಾವಣೆಯಲ್ಲಿ ಯೋಗೇಶ್ವರ್ ನಾಲ್ಕು ಬಾರಿ ಸೋಲಿನ ಸುಳಿಗೆ ಸಿಲುಕಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಒಮ್ಮೆಯೂ ಸೋಲು ಅನುಭವಿಸಿಲ್ಲ ಎಂಬುದು ವಿಶೇಷ.
ಚನ್ನಪಟ್ಟಣ : ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದ್ದ 5 ಚುನಾವಣೆಯಲ್ಲಿ ಯೋಗೇಶ್ವರ್ ನಾಲ್ಕು ಬಾರಿ ಸೋಲಿನ ಸುಳಿಗೆ ಸಿಲುಕಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಒಮ್ಮೆಯೂ ಸೋಲು ಅನುಭವಿಸಿಲ್ಲ ಎಂಬುದು ವಿಶೇಷ.
2008, 2018 ಹಾಗೂ 2023ರ ವಿಧಾನಸಭೆ ಚುನಾವಣೆ ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಾಗ ಅವರಿಗೆ ಸೋಲಾಗಿದೆ. 2011ರ ವಿಧಾನಸಭೆ ಉಪಚುನಾವಣೆಯಲ್ಲಿ ಒಮ್ಮೆ ಮಾತ್ರ ಬಿಜೆಪಿಯಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದಾರೆ.
ಆದರೆ, 2004, 2008 ಹಾಗೂ ಇದೀಗ 2024ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅವರು ಮೂರೂ ಬಾರಿಯೂ ಗೆಲುವು ಸಾಧಿಸಿದ್ದಾರೆ.