ದಲಿತ ಸಂಘಟನೆಯಿಂದ ಪ್ರತಿಭಟನೆ

| Published : Nov 16 2023, 01:15 AM IST

ಸಾರಾಂಶ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು, ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುಬ್ಬಿ ತಾಲೂಕು ತಹಸೀಲ್ದಾರ್ ಮತ್ತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವಿರುದ್ಧ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಗುಬ್ಬಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು, ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಗುಬ್ಬಿ ತಾಲೂಕು ತಹಸೀಲ್ದಾರ್ ಮತ್ತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವಿರುದ್ಧ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ, ದಲಿತರ ಹಕ್ಕು ಕಾಯ್ದೆಗಳ ಬಗ್ಗೆ ಕಾನೂನಾತ್ಮಕ ಚರ್ಚಿಸಲು ಅಧಿಕಾರಿಗಳು ನಮ್ಮನ್ನು ದಲಿತರು ಎನ್ನುವ ಕಾರಣದಿಂದ ಉದಾಸೀನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳೊಂದಿಗೆ ತಾಲೂಕು ದಲಿತ ಮುಖಂಡರು ಕಾನೂನಿನ ಸವಲತ್ತು ಕೇಳಿದಾಗ ನಮ್ಮನ್ನು ನಿಂದಿಸಿದ್ದಲ್ಲದೆ, ದೂರು ನೀಡುತ್ತಾರೆ, ಈ ವಿಚಾರವಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಭೇಟಿ ವೇಳೆ ಅನ್ಯಾಯ ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಕುರಿತು ಬೇಸರ ವ್ಯಕ್ತಪಡಿಸಿದರು. ಜಿಹೊಸಹಳ್ಳಿ ಗ್ರಾಮದ ದಲಿತ ಮುಖಂಡ ರವೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ತಹಸೀಲ್ದಾರರನ್ನು ಭೇಟಿ ಮಾಡಿ 120 ದಲಿತ ಕುಟುಂಬಗಳಿವೆ. ಸಾರ್ವಜನಿಕ ಸ್ಮಶಾನಕ್ಕಾಗಿ ಸರ್ವೇ ನಂಬರ್ 28ರಲ್ಲಿ 1.10 ಕುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಅಳತೆ, ಹದ್ದು ಬಸ್ತು ಮಾಡಿ ಮತ್ತು ಗ್ರಾ.ಪಂ.ಗೆ ಹಸ್ತಾಂತರಿಸಲು ನಾಲ್ಕು ವರ್ಷಗಳಿಂದ ತಾಲೂಕು ತಹಸೀಲ್ದಾರ್‌ ಕಚೇರಿಗೆ ಅಲೆದಾಟ ನಡೆಸಿದ್ದೇವೆ. ಸಾರ್ವಜನಿಕ ಸ್ಮಶಾನ ಗುರುತಿಸಿ ಎಂದು ಕೇಳಲು ಹೋದ ದಲಿತ ಮುಖಂಡರಿಗೆ ಏಕವಚನದಲ್ಲಿ ನಿಂದಿಸಿ ನಿಮ್ಮ ಮನೆಯಂಗಳದಲ್ಲಿ ಶವ ಸಂಸ್ಕಾರ ಮಾಡಿಕೊಳ್ಳಿ ಎಂದು ಕಠೋರವಾಗಿ ಮಾತನಾಡಿ, ದಲಿತ ಮುಖಂಡನನ್ನುಅವಮಾನಿಸಿರುವ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಪ್ರತಿಭಟನೆ ಮಾಡಿದರು.

ಸ್ಥಳಕ್ಕೆ ಉಪವಿಭಾಗದಿಕಾರಿ ಗೌರವ್ ಕುಮಾರ್ ಶೆಟ್ಟಿ ಭೇಟಿ ನೀಡಿ ಮನವಿ ಸ್ವೀಕರಿಸಿ, ಸಮಸ್ಯೆ ಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ನಾಗರಾಜು, ನರಸಿಂಹಮೂರ್ತಿ,ಚೇಳೂರು ಶಿವನಂಜಪ್ಪ, ಈಶ್ವರಯ್ಯ,ನಟರಾಜು, ಶಿವಸ್ವಾಮಿ, ರಾಜಣ್ಣ, ರೈತ ಸಂಘದ ಲೋಕೇಶ್, ವಿಜಯಕುಮಾರ್, ಉಮೇಶ್ ಯೋಗೇಶ್, ದಲಿತ ಗಂಗಣ್ಣ, ಮಧು ಭಾಗಿಯಾಗಿದ್ದಾರೆ.

ಫೋಟೊ.......

15 ಜಿ ಯು ಬಿ 1

ಗುಬ್ಬಿ ತಾಲೂಕು ಕಚೇರಿ ಮುಂದೆ ದಲಿತ ಸಂಘಟನೆಯಿಂದ ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗದಿಕಾರಿ ಗೌರವ್ ಕುಮಾರ್ ಶೆಟ್ಟಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರಿಗೆ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.