ಡಿಕೆ ಬೆಂಬಲಿಗ ಶಾಸಕರ ಸಂಖ್ಯೆ ಜಾಸ್ತಿ ಇಲ್ಲ : ಸಿದ್ದರಾಮಯ್ಯ

| N/A | Published : Jul 11 2025, 01:47 AM IST / Updated: Jul 11 2025, 05:40 AM IST

Siddaramaiah
ಡಿಕೆ ಬೆಂಬಲಿಗ ಶಾಸಕರ ಸಂಖ್ಯೆ ಜಾಸ್ತಿ ಇಲ್ಲ : ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಸುದ್ದಿವಾಹಿನಿ ‘ಇಂಡಿಯಾ ಟುಡೇ’ಯ ರಾಜ್‌ದೀಪ್‌ ಸರದೇಸಾಯಿ ಅವರಿಗೆ ಸಂದರ್ಶನ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕು ಎಂದು ಆಗ್ರಹಿಸುತ್ತಿರುವ ಶಾಸಕರ ಸಂಖ್ಯೆ ಜಾಸ್ತಿ ಇಲ್ಲ ಎಂದು ಹೇಳಿದ್ದಾರೆ.

 ನವದೆಹಲಿ :  ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಲ್ಲಿರುವ ಮುಖ್ಯಮಂತ್ರಿ ಹುದ್ದೆ ಬದಲಾವಣೆ ವಿಷಯ ದೆಹಲಿಯಲ್ಲಿ ಭಾರೀ ಸದ್ದು ಮಾಡಿದೆ. ಈ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಸುದ್ದಿವಾಹಿನಿ ‘ಇಂಡಿಯಾ ಟುಡೇ’ಯ ರಾಜ್‌ದೀಪ್‌ ಸರದೇಸಾಯಿ ಅವರಿಗೆ ಸಂದರ್ಶನ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕು ಎಂದು ಆಗ್ರಹಿಸುತ್ತಿರುವ ಶಾಸಕರ ಸಂಖ್ಯೆ ಜಾಸ್ತಿ ಇಲ್ಲ ಎಂದು ಹೇಳಿದ್ದಾರೆ.

ರಾಜ್‌ದೀಪ್‌: ಪೂರ್ಣಾವಧಿಗೆ ಸಿಎಂ ಆಗಿರುತ್ತೀರೋ ಅಥವಾ 2023ರಲ್ಲಿ ನಿರ್ಧರಿಸಿದ್ದಂತೆ ಡಿಕೆಶಿ ಅವರಿಗೆ ಅಧಿಕಾರ ಹಸ್ತಾಂತರಿಸುತ್ತೀರೋ?

ಸಿದ್ದರಾಮಯ್ಯ : ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದು, ಅವಧಿ ಪೂರ್ಣಗೊಳಿಸಲಿದ್ದೇನೆ. ಇದನ್ನು ಈಗಾಗಲೇ ಸಂಪುಟ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ. ಆ ವೇಳೆ ಡಿ.ಕೆ.ಶಿವಕುಮಾರ್‌ ಕೂಡ ಇದ್ದರು. ಕುರ್ಚಿ ಈಗ ಖಾಲಿ ಇಲ್ಲ ಎಂದು ಅವರೂ ಹೇಳಿದ್ದಾರೆ. ನಾವು ತೆಗೆದುಕೊಳ್ಳುವ ನಿರ್ಧಾರವನ್ನು ಅನುಸರಿಸಬೇಕು ಎಂದು ಹೈಕಮಾಂಡ್‌ ಸೂಚಿಸಿದೆ. ಅದನ್ನು ನಾನು, ಶಿವಕುಮಾರ್‌ ಹಾಗೂ ಎಲ್ಲರೂ ಪಾಲಿಸಬೇಕು. ಅಧಿಕಾರ ಬಿಟ್ಟುಕೊಡುವ ಬಗ್ಗೆ ಹೈಕಮಾಂಡ್‌ ನನಗೇನೂ ಹೇಳಿಲ್ಲ.

 ರಾಜ್‌: ರಣದೀಪ್‌ ಸುರ್ಜೇವಾಲಾ ಅವರು ಬೆಂಗಳೂರು, ದೆಹಲಿಯಲ್ಲಿ ಶಾಸಕರನ್ನು ಭೇಟಿಯಾದಾಗ ಕೆಲವರು ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ : ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಶಾಸಕರ ಬಳಿ ನಾಯಕತ್ವ ಬದಲಾವಣೆ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳಿಲ್ಲ. ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆಯಷ್ಟೇ ಅವರು ಕೇಳಿದ್ದರು.

ರಾಜ್‌: ಕೆಲವು ಶಾಸಕರು ಬಹಿರಂಗವಾಗಿ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ್ದಾರಲ್ಲಾ?

ಸಿದ್ದರಾಮಯ್ಯ : ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸುವ ಶಾಸಕರಿದ್ದಾರೆ ನಿಜ. ಆದರೆ ಜಾಸ್ತಿ ಇಲ್ಲ.

ರಾಜ್‌: 2028ರಲ್ಲಿ ನಿವೃತ್ತರಾಗಿ ಶಿವಕುಮಾರ್‌ಗೆ ಅವಕಾಶ ಕೊಡುತ್ತೀರಾ?

ಸಿದ್ದರಾಮಯ್ಯ : ರಾಜಕಾರಣಿಗಳು ನಿವೃತ್ತರಾಗುವುದಿಲ್ಲ. ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. 2028ರಲ್ಲೂ ನಾವು ಅಧಿಕಾರಕ್ಕೆ ಬರುತ್ತೇವೆ.

Read more Articles on