ಸಾರಾಂಶ
ರಾಜ್ಯದಲ್ಲಿ ಅಧಿಕಾರಿ ಹಂಚಿಕೆ ಕುರಿತು ಒಡಂಬಡಿಕೆ ಆಗಿದ್ದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು ಹೇಳಿದ್ದಾರೆ.
- ಒಪ್ಪಂದ ಬಗ್ಗೆ ಗೊತ್ತಿಲ್ಲ, ಆಗಿದ್ದರೆ ನೆರವೇರಲಿ- ರಂಭಾಪರಿಶ್ರೀ ಬೆಂಬಲ ಬೆನ್ನಲ್ಲೇ ಬ್ಯಾಟಿಂಗ್
=ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಕೂಡಾ ಮಹತ್ವದ್ದು
ಅವರಿಗೂ ಸಿಎಂ ಆಗುವ ಅವಕಾಶ ಸಿಗಬೇಕು ಎಂದಿದ್ದ ರಂಭಾಪುರಿ ಶ್ರೀಗಳುಇದೀಗ ರಂಭಾಪುರಿಶ್ರೀ ಬೆಂಬಲಿಸಿದ ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು
ಒಡಂಬಡಿಕೆ ಆಗಿದ್ದರೆ ಡಿ.ಕೆ.ಶಿವಕುಮಾರ್‌ಗೂ ಸಿಎಂ ಸ್ಥಾನ ನೀಡುವುದು ಸೂಕ್ತ==
ಕನ್ನಡಪ್ರಭ ವಾರ್ತೆ ಬಾಗಲಕೋಟೆರಾಜ್ಯದಲ್ಲಿ ಅಧಿಕಾರಿ ಹಂಚಿಕೆ ಕುರಿತು ಒಡಂಬಡಿಕೆ ಆಗಿದ್ದರೆ ಹೈಕಮಾಂಡ್ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು ಹೇಳಿದ್ದಾರೆ. ಈ ಮೂಲಕ ಸರ್ಕಾರದ ರಚನೆ ವೇಳೆ ಸಿಎಂ ಸ್ಥಾನ ಕುರಿತು ಒಡಂಬಡಿಕೆ ಆಗಿದ್ದರೆ ಹೈಕಮಾಂಡ್ ಅದನ್ನು ನೆರವೇರಿಸಲಿ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೀನಗಡದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರಿಗಳು, ‘ಸರ್ಕಾರ ರಚನೆ ಸಂದರ್ಭದಲ್ಲಿ ಏನು ಒಡಂಬಡಿಕೆ ಆಗಿತ್ತು ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಒಡಂಬಡಿಕೆ ಬಗ್ಗೆ ಗೊತ್ತಿಲ್ಲದೆ ಈ ಸಂದರ್ಭದಲ್ಲಿ ಮಾತನಾಡುವುದು ಸೂಕ್ತ ಅಲ್ಲ. ಒಂದು ವೇಳೆ ಒಡಂಬಡಿಕೆ ಆಗಿದ್ದೇ ಆದರೆ ಒಡಂಬಡಿಕೆಗೆ ಅನುಗುಣವಾಗಿ ಪಕ್ಷದ ಹೈಕಮಾಂಡ್ ನೆರವೇರಿಸಬೇಕು ಎಂದು ಹೇಳಿದರು.ಡಿಕೆಶಿ, ಸಿದ್ದು ಮುತ್ಸದ್ಧಿಗಳು:
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿಗಳು. ಸಾಕಷ್ಟು ಅನುಭವ ಹೊಂದಿರುವಂತವರು. ಕುರ್ಚಿಗಾಗಿ ಜಗಳ, ಕಿತ್ತಾಟ, ಸಮಸ್ಯೆ ಮಾಡುವುದಕ್ಕಿಂತ ರಾಜ್ಯದ ಅಭಿವೃದ್ಧಿ ಯಾವ ರೀತಿ ಮಾಡಬೇಕು ಅನ್ನೋದನ್ನು ಎಲ್ಲಾ ಮುಖಂಡರು ಗಮನ ಕೊಡಬೇಕು ಶ್ರೀಗಳು ಸಲಹೆ ನೀಡಿದರು.ಹಿಂದೂಗಳ ಹತ್ಯೆ ನೋವಿನ ಸಂಗತಿ:
ರಾಜ್ಯದಲ್ಲಿ ಹಿಂದೂಗಳ ಹತ್ಯೆ ಆಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಅಮಾಯಕ ಹಿಂದೂಗಳ ಹತ್ಯೆಯನ್ನು ಬಹಳಷ್ಟು ಕಡೆ ನೋಡುತ್ತಿದ್ದೇವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಭಾರತ ಹಲವು ಸಮುದಾಯ, ಸಂಪ್ರದಾಯದ ವಿಶಿಷ್ಟ ದೇಶ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಪರಿಪಾಲನೆ ಈ ದೇಶದ ಕಡ್ಡಾಯ ನಿಯಮ ಎಂದರು.