ಸಾರಾಂಶ
ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದುದು. ಇಲ್ಲಿಗೆ ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಬರಬೇಕು ಎನ್ನುತ್ತೇವೆ. ಆದ್ದರಿಂದ ಶಿಕ್ಷಣ ಸಚಿವರೂ ನೀಟ್ ಆಗಿ, ಶಿಸ್ತಿನಿಂದ ಇರಬೇಕು ಎಂದು ಮಕ್ಕಳ ಪೋಷಕರು ಹೇಳಿದ್ದನ್ನು ನಾನು ಹೇಳಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಉಡುಪಿ : ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದುದು. ಇಲ್ಲಿಗೆ ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಬರಬೇಕು ಎನ್ನುತ್ತೇವೆ. ಆದ್ದರಿಂದ ಶಿಕ್ಷಣ ಸಚಿವರೂ ನೀಟ್ ಆಗಿ, ಶಿಸ್ತಿನಿಂದ ಇರಬೇಕು ಎಂದು ಮಕ್ಕಳ ಪೋಷಕರು ಹೇಳಿದ್ದನ್ನು ನಾನು ಹೇಳಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
‘ವಿಜಯೇಂದ್ರ ಫ್ರೀ ಇದ್ದರೆ ಬಂದು ನನಗೆ ಹೇರ್ ಕಟಿಂಗ್ ಮಾಡಲಿ’ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಶಿಕ್ಷಣ ಕ್ಷೇತ್ರ ಬಹಳ ಪವಿತ್ರವಾದುದು. ಇಲ್ಲಿಗೆ ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಬರಬೇಕು ಎನ್ನುತ್ತೇವೆ. ಆದ್ದರಿಂದ ಶಿಕ್ಷಣ ಸಚಿವರೂ ನೀಟ್ ಆಗಿ ಶಿಸ್ತಿನಿಂದ ಇರಬೇಕು ಎಂದು ಮಕ್ಕಳ ಪೋಷಕರು ಹೇಳಿದ್ದನ್ನು ನಾನು ಹೇಳಿದ್ದೇನೆ. ಪಾಪ ಅದಕ್ಕೆ ಅವರು ಮನಸ್ಸಿಗೆ ಬಹಳ ನೋವು ಮಾಡಿಕೊಂಡಂತಿದೆ. ನೋವು ಮಾಡಿಕೊಳ್ಳುವುದನ್ನು ಬಿಟ್ಟು ಶಿಕ್ಷಣ ಕ್ಷೇತ್ರವನ್ನು ಉದ್ದಾರ ಮಾಡಲಿ ಎಂದರು.
ಕನ್ನಡ ಗೊತ್ತಿರುವವರು ಶಿಕ್ಷಣ ಸಚಿವರಾದರೆ ರಾಜ್ಯಕ್ಕೂ, ಶಿಕ್ಷಣಕ್ಕೂ ಒಳಿತು. ಆದರೆ ಕನ್ನಡ ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರು ಶಿಕ್ಷಣವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಅನ್ನೋ ನಂಬಿಕೆ ನನಗೆ ಇಲ್ಲ ಎಂದು ಹೇಳಿದರು.