ಸಾರಾಂಶ
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಮತಾ ಬ್ಯಾನರ್ಜಿ ಅವರನ್ನು ನೃತ್ಯಗಾರ್ತಿ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಅರಣವಾಗಿದ್ದು, ಟಿಎಂಸಿ ಶಾಸಕ, ಸಂಸದರು ಗಿರಿರಾಜ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಗಿರಿರಾಜ್ ವಿರುದ್ಧ ಟಿಎಂಸಿ ಸಂಸದ, ಶಾಸಕರ ಪ್ರತಿಭಟನೆ
ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಗಿರಿರಾಜ್ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಮತಾ ಬ್ಯಾನರ್ಜಿ ಅವರನ್ನು ನೃತ್ಯಗಾರ್ತಿ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಅರಣವಾಗಿದ್ದು, ಟಿಎಂಸಿ ಶಾಸಕ, ಸಂಸದರು ಗಿರಿರಾಜ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಂಗ್, ಮಮತಾ ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ನೃತ್ಯ ಮಾಡಿದ್ದುದನ್ನು ಪ್ರಸ್ತಾಪಿಸಿ, ‘ಮಮತಾ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನರ್ತಿಸುತ್ತಿದ್ದಾರೆ. ಇಚು ಸರಿಯಲ್ಲ’ ಎಂದಿದ್ದರು.ಇದಕ್ಕೆ ಟಿಎಂಸಿ ಸಂಸದೆಯರು ಕೆಂಡಾಮಂಡಲವಾಗಿದ್ದು, ರಾಷ್ಟ್ರದ ಏಕೈಕ ಮಹಿಳಾ ಮುಖ್ಯಮಂತ್ರಿಯನ್ನು ಅಪಮಾನಿಸಿದ ಗಿರಿರಾಜ್ ಸಿಂಗ್ ಕ್ಷಮೆ ಕೇಳಿದರೂ ಕಡಿಮೆಯೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂದು ಸಂಸತ್ ಭವನದಲ್ಲಿ ಟಿಎಂಸಿಯ ಮಹಿಳಾ ಸಂಸದೆಯರು ಈ ವಿಚಾರದ ಕುರಿತಾಗಿ ಪ್ರತಿಭಟನೆ ನಡೆಸಿದ್ದಾರೆ. ಬಂಗಾಳ ವಿಧಾನಸಭೆಯಲ್ಲೂ ಟಿಎಂಸಿ ಶಾಸಕರು ಪ್ರತಿಭಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗಿರಿರಾಜ್ ಸಿಂಗ್ ‘ಮಮತಾ ಅವರು ರಾಜ್ಯದಲ್ಲಿ ಬರ, ನಿರುದ್ಯೋಗ ಮುಂತಾದ ಸಮಸ್ಯೆ ತಾಂಡವವಾಡುತ್ತಿರುವಾಗ ಸಮ್ಮೇಳನದಲ್ಲಿ ಭಾಗವಹಿಸುವ ಅಗತ್ಯತೆ ಕುರಿತು ಹೇಳಿಕೆ ನೀಡಿದ್ದೆ. ಅದನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಟಿಎಂಸಿ ಕಾರ್ಯಕರ್ತರು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದಿದ್ದಾರೆ.