ಸಾರಾಂಶ
ಇದು ಪ್ರಜಾಪ್ರಭುತ್ವದ ಕಾಲ. ನಾನು ಮೈಸೂರು ಜನರ ಪ್ರತಿನಿಧಿಯಾಗಿ ಪ್ರಧಾನಿ ಜೊತೆ ಚಾಮುಂಡೇಶ್ವರಿಯ ತೇರು ಎಳೆಯಲು ಅವಕಾಶ ಮಾಡಿಕೊಡಿ ಎಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೋರಿದರು.
ಮೈಸೂರು : ಇದು ಪ್ರಜಾಪ್ರಭುತ್ವದ ಕಾಲ. ನಾನು ಮೈಸೂರು ಜನರ ಪ್ರತಿನಿಧಿಯಾಗಿ ಪ್ರಧಾನಿ ಜೊತೆ ಚಾಮುಂಡೇಶ್ವರಿಯ ತೇರು ಎಳೆಯಲು ಅವಕಾಶ ಮಾಡಿಕೊಡಿ ಎಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೋರಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ಮತ್ತು ಕಾವೇರಿಯ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.
ಅಂಬೇಡ್ಕರ್ ಅವರಿಗೂ ಮೈಸೂರಿಗೂ ನಂಟಿದೆ. ಅವರು ಸಂವಿಧಾನ ಜಾರಿಗೊಳಿಸುವ ವೇಳೆ ಮೈಸೂರು ಮಹಾರಾಜರ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲೇಖಿಸಿದ್ದಾಗಿ ತಿಳಿಸಿದರು.
ಈಗ ಮೋದಿ ಅವರ 10 ವರ್ಷದ ಕಾರ್ಯ, ಭಾರತದ ಅಭಿವೃದ್ಧಿ, ಜನರ ಮೇಲೆತ್ತುವ ಕೆಲಸ ಮಾಡಿದ್ದಾರೆ. ಯೋಗಕ್ಕೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮೂಲಕ ಮಹಾರಾಜರು ಆಶ್ರಯ ನೀಡಿದರು. ಅದೇ ಯೋಗವನ್ನು ಮೈಸೂರು ಅರಮನೆಯ ಆವರಣದಲ್ಲಿ ಮೋದಿ ಅವರು ಆಯೋಜಿಸುವ ಮೂಲಕ ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತದ ಪರಂಪರೆಯನ್ನು ಸಂರಕ್ಷಿಸುವ ಕೆಲಸವನ್ನೂ ಅವರು ಮಾಡಿರುವುದಾಗಿ ಹೇಳಿದರು.ಮೈಸೂರು
ಇದು ಪ್ರಜಾಪ್ರಭುತ್ವದ ಕಾಲ. ನಾನು ಮೈಸೂರು ಜನರ ಪ್ರತಿನಿಧಿಯಾಗಿ ಪ್ರಧಾನಿ ಜೊತೆ ಚಾಮುಂಡೇಶ್ವರಿಯ ತೇರು ಎಳೆಯಲು ಅವಕಾಶ ಮಾಡಿಕೊಡಿ ಎಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೋರಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ಮತ್ತು ಕಾವೇರಿಯ ಆಶೀರ್ವಾದ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಿದರು.
ಅಂಬೇಡ್ಕರ್ ಅವರಿಗೂ ಮೈಸೂರಿಗೂ ನಂಟಿದೆ. ಅವರು ಸಂವಿಧಾನ ಜಾರಿಗೊಳಿಸುವ ವೇಳೆ ಮೈಸೂರು ಮಹಾರಾಜರ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲೇಖಿಸಿದ್ದಾಗಿ ತಿಳಿಸಿದರು.
ಈಗ ಮೋದಿ ಅವರ 10 ವರ್ಷದ ಕಾರ್ಯ, ಭಾರತದ ಅಭಿವೃದ್ಧಿ, ಜನರ ಮೇಲೆತ್ತುವ ಕೆಲಸ ಮಾಡಿದ್ದಾರೆ. ಯೋಗಕ್ಕೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮೂಲಕ ಮಹಾರಾಜರು ಆಶ್ರಯ ನೀಡಿದರು. ಅದೇ ಯೋಗವನ್ನು ಮೈಸೂರು ಅರಮನೆಯ ಆವರಣದಲ್ಲಿ ಮೋದಿ ಅವರು ಆಯೋಜಿಸುವ ಮೂಲಕ ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತದ ಪರಂಪರೆಯನ್ನು ಸಂರಕ್ಷಿಸುವ ಕೆಲಸವನ್ನೂ ಅವರು ಮಾಡಿರುವುದಾಗಿ ಹೇಳಿದರು.