ಸಾರಾಂಶ
ಡಿಜಿಟಲ್ ಮಾಧ್ಯಮಗಳಿಗೆ ಪ್ರಾಮುಖ್ಯತೆಯನ್ನು ಬಳಸಿಕೊಂಡು ಸರ್ಕಾರ ಯೋಜನೆಗಳ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ.
ನವದೆಹಲಿ: ಇದೇ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮಗಳಿಗೆ ಜಾಹಿರಾತು ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಹೊಸ ನೀತಿಯನ್ನು ಜಾರಿ ಮಾಡಿದೆ. ಡಿಜಿಟಲ್ ಮಾಧ್ಯಮಗಳಿಗೆ ಪ್ರಾಮುಖ್ಯತೆಯನ್ನು ಬಳಸಿಕೊಂಡು ಸರ್ಕಾರ ಯೋಜನೆಗಳ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸುದ್ದಿ, ಸಿನಿಮಾ ಸೇರಿದಂತೆ ಹಲವು ವಿಚಾರಗಳಿಗಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಜಾಹಿರಾತು ವಿಭಾಗವಾದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ಹೊಸ ಜಾಹೀರಾತು ನೀತಿಯನ್ನು ರೂಪಿಸಿದೆ. ಇದರ ಅನ್ವಯ ಒಟಿಟಿ ವೇದಿಕೆಗಳು, ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಜಾಹೀರಾತು ನೀಡಲಾಗುತ್ತದೆ. ಹೊಸ ಡಿಜಿಟಲ್ ನಿಯಮ: ಹೊಸ ಡಿಜಿಟಲ್ ನಿಯಮದ ಪ್ರಕಾರ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳು ಕನಿಷ್ಠಪಕ್ಷ 1 ವರ್ಷದಿಂದ ಸಕ್ರಿಯವಾಗಿರಬೇಕು. ಮಾಸಿಕ 2 ಕೋಟಿಯಿಂದ ಕನಿಷ್ಠ 2.5 ಲಕ್ಷ ನೋಡುಗರನ್ನು ಹೊಂದಿರಬೇಕು ಎಂದು ಹೇಳಲಾಗಿದೆ.