ಸಾರಾಂಶ
ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜ್ಯಪಾಲರು ಮತ್ತು ಡಿಎಂಕೆ ಸರ್ಕಾರದ ನಡುವೆ ಜಟಾಪಟಿ ಆರಂಭವಾಗಿದೆ. ಸರ್ಕಾರದ ಅಂಗೀಕರಿಸಿದ್ದ 10 ಮಸೂದೆಗಳಿಗೆ ಸಹಿ ಹಾಕದೇ ರಾಜ್ಯಪಾಲ ಆರ್.ಎನ್.ರವಿ ಅವರು ಮರಳಿಸಿದ್ದಾರೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರ್ಕಾರ, ಶನಿವಾರ ಮತ್ತೆ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿ ಮತ್ತೆ 10 ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲು ನಿರ್ಧರಿಸಿದೆ.
10 ಮಸೂದೆಗೆ ಸಹಿ ಹಾಕದೇ ಸರ್ಕಾರಕ್ಕೆ ಮರಳಿಸಿದ ರಾಜ್ಯಪಾಲ
ಮಸೂದೆ ಅಂಗೀಕಾರಕ್ಕಾಗಿ ನಾಳೆ ಮತ್ತೆ ವಿಧಾನಸಭೆ ಅಧಿವೇಶನಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜ್ಯಪಾಲರು ಮತ್ತು ಡಿಎಂಕೆ ಸರ್ಕಾರದ ನಡುವೆ ಜಟಾಪಟಿ ಆರಂಭವಾಗಿದೆ. ಸರ್ಕಾರದ ಅಂಗೀಕರಿಸಿದ್ದ 10 ಮಸೂದೆಗಳಿಗೆ ಸಹಿ ಹಾಕದೇ ರಾಜ್ಯಪಾಲ ಆರ್.ಎನ್.ರವಿ ಅವರು ಮರಳಿಸಿದ್ದಾರೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸರ್ಕಾರ, ಶನಿವಾರ ಮತ್ತೆ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿ ಮತ್ತೆ 10 ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ರವಾನಿಸಲು ನಿರ್ಧರಿಸಿದೆ.ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ವಿಳಂಬ ಮಾಡುತ್ತಿರುವ ಬಗ್ಗೆ ತಮಿಳುನಾಡು ಸರ್ಕಾರ ಇತ್ತೀಚೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ, ‘ಮಸೂದೆ ಹಾಗೂ ಇತರ ಸರ್ಕಾರಿ ಕಡತಗಳಿಗೆ ತಮ್ಮ ಅಂಗೀಕಾರ ತಿಳಿಸಲು ಅನಗತ್ಯ ವಿಳಂಬ ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ದಕ್ಕೆ ತರಬಾರದು ಎಂದು ನ್ಯಾಯಾಲಯ ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳ ರಾಜ್ಯಪಾಲರಿಗೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ, ರಾಜ್ಯಪಾಲರು ಮತ್ತೆ 10 ಮಹತ್ವದ ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ.
ರಾಜ್ಯಪಾಲರು 12 ಮಸೂದೆಗಳು, 4 ಸರ್ಕಾರಿ ಆದೇಶಗಳು ಹಾಗೂ ಸನ್ನಡತೆ ಆಧಾರದ ಮೇಲೆ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಕಡತಗಳಿಗೆ ಅಂಗೀಕಾರದ ಒಪ್ಪಿಗೆ ನೀಡಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.