ಜಿಟಿಡಿ ಅಸಮಾಧಾನ ಅವರ ವೈಯಕ್ತಿಕ ಸಮಸ್ಯೆ : ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ

| N/A | Published : Feb 03 2025, 10:49 AM IST

HD Kumaraswamy

ಸಾರಾಂಶ

ಜಿ.ಟಿ.ದೇವೇಗೌಡರ ಅಸಮಾಧಾನ ಅವರ ವೈಯಕ್ತಿಕ ಸಮಸ್ಯೆ, ಪಕ್ಷದ ಸಮಸ್ಯೆಯಲ್ಲ. ಅವರಿಗೆ ಪರ್ಸನಲ್ ಅಜೆಂಡಾ ಇರಬಹುದು. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಗೊಂದಲಗಳಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಚನ್ನರಾಯಪಟ್ಟಣ : ಜಿ.ಟಿ.ದೇವೇಗೌಡರ ಅಸಮಾಧಾನ ಅವರ ವೈಯಕ್ತಿಕ ಸಮಸ್ಯೆ, ಪಕ್ಷದ ಸಮಸ್ಯೆಯಲ್ಲ. ಅವರಿಗೆ ಪರ್ಸನಲ್ ಅಜೆಂಡಾ ಇರಬಹುದು. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಗೊಂದಲಗಳಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿ.ಟಿ.ದೇವೇಗೌಡರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಜಿ.ಟಿ.ದೇವೇಗೌಡರು ಆಯಾ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ. ಒಂದೊಂದು ಭಾರಿ ಏಕವಚನದಲ್ಲಿ ಮಾತನಾಡಿದ್ದೂ ಉಂಟು. ಅವರನ್ನು 15 ವರ್ಷದಿಂದ ನಾನು ನೋಡಿದ್ದೇನೆ, ಇದೇನು ಹೊಸದಲ್ಲ. ಮನೆ ಅಂದ ಮೇಲೆ ಜಗಳ ಇದ್ದದ್ದೆ. ಆದರೆ, ಜೆಡಿಎಸ್ ನಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಬಿಜೆಪಿ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್ಡಿಕೆ, ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ನೀಡುವುದು ತಪ್ಪು. ಬಿಜೆಪಿ ಹೈಕಮಾಂಡ್ ನವರು ಸರಿಪಡಿಸಿಕೊಳ್ಳುತ್ತಾರೆ ಎಂದರು.

ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿ, ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಅನುದಾನ ಬರದೇ ಇರಬಹುದು. ಆದರೆ, ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಸಾಫ್ಟ್‌ವೇರ್ ಇಂಡಸ್ಟ್ರಿಗೆ ಕರ್ನಾಟಕ ಹಬ್ ಆಗಿದೆ. ಅದೇ ರೀತಿ ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕ್ಷೇತ್ರಕ್ಕೂ ಉತ್ತೇಜನ ನೀಡಲು ಯತ್ನಿಸುತ್ತಿದ್ದೇನೆ. ಆಂಧ್ರದಲ್ಲಿ ವೈಜಾಗ್‌ ಸ್ಟೀಲ್‌ ಗೆ ಮರುಜೀವ ನೀಡಲು ಕ್ರಮ ಕೈಗೊಂಡಿದ್ದೇವೆ. ಅದೇ ರೀತಿ, ಭದ್ರಾವತಿ ವಿಐಎಸ್‌ಎಲ್‌ ಗೂ ಮರುಜೀವ ಕೊಡುವ ಕೆಲಸ ಆರಂಭಿಸಿದ್ದೇನೆ ಎಂದರು.

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್  ಕ್ಷೇತ್ರಕ್ಕೂ ಉತ್ತೇಜನ

ಚನ್ನರಾಯಪಟ್ಟಣ : ಸಾಫ್ಟ್‌ವೇರ್‌ ಇಂಡಸ್ಟ್ರಿಗೆ ಕರ್ನಾಟಕ ಹಬ್ ಆಗಿದೆ. ಅದೇ ರೀತಿ ಎಐ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್) ಕ್ಷೇತ್ರಕ್ಕೂ ಉತ್ತೇಜನ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆಂಧ್ರದಲ್ಲಿ ವೈಜಾಗ್‌ ಸ್ಟೀಲ್‌ ಗೆ ಮರುಜೀವ ನೀಡಲು ಕ್ರಮ ಕೈಗೊಂಡಿದ್ದೇವೆ. ಅದೇ ರೀತಿ, ಭದ್ರಾವತಿ ವಿಐಎಸ್‌ಎಲ್‌ ಗೂ ಮರುಜೀವ ಕೊಡುವ ಕೆಲಸ ಆರಂಭಿಸಿದ್ದೇನೆ. ಈ ರಾಜ್ಯದ ಅಭಿವೃದ್ಧಿಗೆ ದೇವೇಗೌಡರಿಗೆ ಮಾಡಲಾಗದ ಕೆಲಸಗಳನ್ನು ನಾನು ಮಾಡಲು ಯೋಜನೆ ಹೊಂದಿದ್ದೇನೆ. ಅವರ ಮಾರ್ಗದರ್ಶನದೊಂದಿಗೆ ಯೋಜನೆಗಳನ್ನು ಜಾರಿಗೆ ತರಲು ನಾನು ಯತ್ನಿಸುತ್ತಿದ್ದೇನೆ. ಸಾಫ್ಟ್‌ವೇರ್‌ ಇಂಡಸ್ಟ್ರಿಗೆ ಕರ್ನಾಟಕ ಹಬ್ ಆಗಿದೆ. ಅದೇ ರೀತಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್ ಕ್ಷೇತ್ರಕ್ಕೂ ಉತ್ತೇಜನ ನೀಡಲು ಯತ್ನಿಸುತ್ತಿದ್ದೇನೆ ಎಂದು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡರು.

ಕೇಂದ್ರ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಯೋಜನೆ, ಅನುದಾನ ಬರದೇ ಇರಬಹುದು. ಆದರೆ, ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದರು.

ವಿಮಾನ ನಿಲ್ದಾಣ ದೇವೇಗೌಡರ ಕನಸು. ಈ ಯೋಜನೆ ಹಾಸನದ ಜನರ ಓಡಾಟಕ್ಕಾಗಿ ಅಲ್ಲ, ರೈತರ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ಏರ್ ಕಾರ್ಗೋ ಮೂಲಕ ರಫ್ತು ಮಾಡಿ, ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಲು ಯೋಜಿಸಲಾಗಿದೆ. 25 ವರ್ಷಗಳಿಂದ ದೇವೇಗೌಡರಿಗೆ ಇದೇ ಚಿಂತೆ. ಆದರೆ, ಇದನ್ನು ನಿಭಾಯಿಸಲು ರಾಜ್ಯ ಸರ್ಕಾರ ಎಷ್ಟು ಬೆಂಬಲ ನೀಡುತ್ತಿದೆ ಎಂಬುದು ಮುಖ್ಯ ಎಂದರು.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದರೆ ಹೆದರಬೇಡಿ

ಮಂಡ್ಯ

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆತಂದು ಬೆದರಿಕೆ ಹಾಕಿ ಗಲಾಟೆ ಮಾಡಿದರೆ ನನಗೆ ಕರೆ ಮಾಡಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಧೈರ್ಯ ತುಂಬಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ಶ್ರೀ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಅವರ ಉಪಟಳ ಹೆಚ್ಚಾಗಿದೆ. ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡುವಂತೆ ತಿಳಿಸಿದರು.

ಖಾಸಗಿ ಫೈನಾನ್ಸ್ ಅವರು ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ರಾಜ್ಯ ಹಾಗೂ ಕೇಂದ್ರ ಸರಕಾರಗಳೇ ಸಾಲಮಾಡಿಕೊಂಡು ರಾಜಾರೋಷವಾಗಿ ಓಡಾಡುವಾಗ ನೀವೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ. ಫೈನಾನ್ಸ್ ನವರ ಕಿರುಕುಳದಿಂದ ಮರ್ಯಾದೆಗೆ ಹೆದರಿ ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ. ನಿಮ್ಮ ಕುಟುಂಬಗಳ ಉಳಿವಿಗೆ ನಿಮ್ಮಗಳ ಜೀವ ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.