ಸಾರಾಂಶ
ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲು ಪಕ್ಷವು ನೀಡಿರುವಂತ ಜನಪರ ಕಾರ್ಯಕ್ರಮಗಳಾದ ಐದು ಗ್ಯಾರಂಟಿಗಳು ಪ್ರಮುಖವಾದ ಕಾರಣವಾಗಿವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕರ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೋಲಾರ : ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲು ಪಕ್ಷವು ನೀಡಿರುವಂತ ಜನಪರ ಕಾರ್ಯಕ್ರಮಗಳಾದ ಐದು ಗ್ಯಾರಂಟಿಗಳು ಪ್ರಮುಖವಾದ ಕಾರಣವಾಗಿವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕರ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐದು ಗ್ಯಾರೆಂಟಿಗಳ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ಸಿಕ್ಕಿದೆ ಎಂದರು.
ಜನತೆ ಕಾಂಗ್ರೆಸ್ ಪರ ಇದ್ದಾರೆ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವ ಮೂಲಕ ಸದ್ಬಳಕೆಯಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಜನರು ಕಾಂಗ್ರೆಸ್ ಪರ ಇದ್ದಾರೆ, ಯಾವುದೇ ಆಡಳಿತ ಪಕ್ಷಕ್ಕೆ ಸಮರ್ಪಕವಾದ ವಿರೋಧ ಪಕ್ಷಗಳು ಇರಬೇಕು, ಟೀಕೆ ಟಿಪ್ಪಣಿಗಳು ಆರೋಗ್ಯಕರವಾಗಿದ್ದರೆ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲು ಪೂರಕವಾಗಲಿದೆ. ಆದರೆ ಬಿಜೆಪಿ ಪಕ್ಷವು ಆಧಾರ ರಹಿತವಾದ ಆರೋಪಗಳ ಮೂಲಕ ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವ ಜೂತೆಗೆ ಜನರ ದಿಕ್ಕು ತಪ್ಪಿಸುವ ವಿಫಲ ಪ್ರಯತ್ನಗಳು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಉತ್ತಮ ಜನಪರ ಆಡಳಿತ ನೀಡುತ್ತಿರುವುದು ಜನ ಮೆಚ್ಚುಗೆಗಳಿಸಿದೆ ಹಾಗಾಗಿ ಬಿಜೆಪಿ ಪಕ್ಷದವರು ಏನೇ ತಂತ್ರಗಾರಿಕೆಗಳು ಮಾಡಿದರೂ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ, ಮತದಾರ ಪ್ರಭುಗಳು ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಸಮಾನತೆ, ಸಾಮಾಜಿಕ ನ್ಯಾಯ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ, ಧರ್ಮಗಳಿಲ್ಲದೆ ಎಲ್ಲರಿಗೂ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದೆ, ಬರಗಾಲ ಸಂದರ್ಭದಲ್ಲಿ ನರೇಗಾ ಯೋಜನೆಯ ಮೂಲಕ ಉದ್ಯೋಗ ಕಲ್ಪಿಸಿ ಸಂಕಷ್ಟಕ್ಕೆ ಸ್ಪಂದಿಸಿದೆ. ಯಾರೂ ಹಸಿವೆಯಿಂದ ಇರಬಾರದು ಎಂಬ ದೆಸೆಯಲ್ಲಿ ಪ್ರಥಮವಾಗಿ ಸಿದ್ದರಾಮಯ್ಯ ಪಡಿತರ ಚೀಟಿಗೆ ಉಚಿತ ಅಕ್ಕಿ ನೀಡುವ ಮೂಲಕ ಮಾನವೀಯತೆ ಮೆರೆದು ಅನ್ನರಾಮಯ್ಯ ಎನಿಸಿಕೊಂಡರು ನಂತರದಲ್ಲಿ ಕೇಂದ್ರ ಸರ್ಕಾರದ ಅಸಹಕಾರದಿಂದ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ಜಮೆ ಮಾಡಲಾಯಿತು ಎಂದು ತಿಳಿಸಿದರು.ನಮ್ಮ ರಾಜ್ಯದ ರಾಜಕಾರಣಕ್ಕೂ ಬೇರೆ ರಾಜ್ಯದ ರಾಜಕಾರಣಕ್ಕೂ ವ್ಯತ್ಯಾಸಗಳಿವೆ ಹಾಗಾಗಿ ನಾನು ನಿಖರವಾಗಿ ಏನೊಂದು ಹೇಳಲಿಕ್ಕೆ ಸಾಧ್ಯವಾಗದು ಆಯಾಯ ರಾಜ್ಯದ ನಾಯಕರು ತಿಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಯಿಬಾಬಾ ಜನ್ಮದಿನ
ಇಂದು ನಾನು ಕೋಲಾರಕ್ಕೆ ಭೇಟಿ ನೀಡಿರುವ ಮುಖ್ಯ ಉದ್ದೇಶ ಪುಟ್ಟಪರ್ತಿ ಸಾಯಿಬಾಬಾರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜಾಕಾರ್ಯ ಇರುವುದು ಹಾಗಾಗಿ ಬಂದಿರುವೇ ಲೋಕಕಲ್ಯಾಣಕ್ಕಾಗಿ ಉತ್ತಮ ಮಳೆ ಬೆಳೆಗಳಾಗಿ ಶಾಂತಿ ಸಮೃದ್ಧವಾಗಿ ಸಿಗಲಿ ಎಂದು ಪ್ರಾರ್ಥಿಸೋಣ ಎಂದರು.ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಪ್ರಸಾದ್ ಬಾಬು, ಜಯದೇವ, ವೆಂಕಟಪತೇಪ್ಪ, ನಾಗರಾಜ್, ರಾಮಯ್ಯ, ಲಾಲ್ ಬಹದ್ದೂರ್ ಶಾಸ್ತ್ರಿ, ಹಾರೊಹಳ್ಳಿ ರವಿ, ಸುದೀರ್ ಇದ್ದರು.