ಪ್ರಚಾರ ವೇಳೆ ಗೋಧಿ ಕಟಾವು ಮಾಡಿದ ಹೇಮಾ ಮಾಲಿನಿ!

| Published : Apr 13 2024, 01:06 AM IST / Updated: Apr 13 2024, 04:28 AM IST

ಸಾರಾಂಶ

ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಹೇಮಾ ಮಾಲಿನಿ ಚುನಾವಣೆ ಪ್ರಚಾರಕ್ಕಾಗಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆಗ ಗೋದಿ ಗದ್ದೆಗೆ ಇಳಿದು ಸ್ಥಳೀಯ ರೈತ ಮಹಿಳೆಯರೊಂದಿಗೆ ಗೋದಿ ಕಟಾವು ಮಾಡಿದರು.

ಮಥುರಾ: ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಹೇಮಾ ಮಾಲಿನಿ ಚುನಾವಣೆ ಪ್ರಚಾರಕ್ಕಾಗಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆಗ ಗೋದಿ ಗದ್ದೆಗೆ ಇಳಿದು ಸ್ಥಳೀಯ ರೈತ ಮಹಿಳೆಯರೊಂದಿಗೆ ಗೋದಿ ಕಟಾವು ಮಾಡಿದರು.

ಈ ಕುರಿತು ಟ್ವೀಟ್‌ ಮಾಡಿದ ಅವರು, 10 ವರ್ಷಗಳಿಂದ ನಾನು ನಿರಂತರವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಸಂವಾದ ನಡೆಸಲು ಜಮೀನಿಗೆ ಹೋಗಿದ್ದೇನೆ. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿದರು ಎಂದು ಬರೆದುಕೊಂಡಿದ್ದು, ಗೋದಿ ಕಟಾವು ಮಾಡಿದ ಫೋಟೋ ಹಂಚಿಕೊಂಡಿದ್ದಾರೆ.