ಈಗ ನಾನೇನೂ ಹೇಳಲ್ಲ, ಎಲ್ಲವನ್ನೂ ಹೈಕಮಾಂಡೇ ತೀರ್ಮಾನಿಸುತ್ತೆ: ಖರ್ಗೆ

| Published : Nov 24 2025, 02:15 AM IST

ಈಗ ನಾನೇನೂ ಹೇಳಲ್ಲ, ಎಲ್ಲವನ್ನೂ ಹೈಕಮಾಂಡೇ ತೀರ್ಮಾನಿಸುತ್ತೆ: ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

‘ಈಗ ನಡೆದಿರುವ ವಿದ್ಯಮಾನಗಳ ಬಗ್ಗೆ ಹೇಳಲು ನನ್ನ ಹತ್ತಿರ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಹೇಳಲು ನನ್ನ ಹತ್ತಿರ ಏನೂ ಇಲ್ಲ---

- ನಾನು ಹೇಳಿದರೆ ಸರಿ ಹೋಗಲ್ಲ, ಪದೇ ಪದೇ ಕೇಳಿದರೆ ಬೇಸರವಾಗುತ್ತೆ- ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆಗೆ ಎಐಸಿಸಿ ಅಧ್ಯಕ್ಷರ ಸ್ಪಷ್ಟ ಉತ್ತರ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಈಗ ನಡೆದಿರುವ ವಿದ್ಯಮಾನಗಳ ಬಗ್ಗೆ ಹೇಳಲು ನನ್ನ ಹತ್ತಿರ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಧಿಕಾರ ಹಂಚಿಕೆ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭಾನುವಾರವೂ ಹಲವು ಸಚಿವರು, ನಾಯಕರು ಭೇಟಿ ನೀಡಿ ಚರ್ಚಿಸಿದರು. ಖರ್ಗೆ ಅವರು ಬೆಂಗಳೂರು ನಿವಾಸದಲ್ಲೇ ಇದ್ದರೂ ಡಿ.ಕೆ. ಶಿವಕುಮಾರ್‌ ಅವರು ಖರ್ಗೆ ಅವರನ್ನು ಭೇಟಿ ಮಾಡಿರಲಿಲ್ಲ.

ಇದರ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ವಿಷಯವೂ ಇಲ್ಲದೆ ನಾನು ಏನಾದರೂ ಹೇಳಿದರೆ ಸರಿ ಇರುವುದಿಲ್ಲ. ನನ್ನ ಹತ್ತಿರ ಹೇಳಲು ಏನೂ ಇಲ್ಲ. ನೀವು ಇಲ್ಲಿ ನಿಂತು ಪದೇ ಪದೇ ಕೇಳಿದರೆ ನನಗೂ ಬೇಜಾರಾಗುತ್ತದೆ’ ಎಂದರು.

ನನ್ನ ಬಳಿ ಏನೂ ಇಲ್ಲ:

‘ನನ್ನ ವಿಶೇಷ ವಿನಂತಿ ಏನೆಂದರೆ, ನನ್ನ ಹತ್ತಿರ ಹೇಳಲು ಏನೂ ಇಲ್ಲ. ಈಗ ನಡೆದಿರುವ ವಿದ್ಯಮಾನಗಳ ಬಗ್ಗೆ ಹೇಳಲು ನನ್ನ ಬಳಿ ಏನೂ ಇಲ್ಲ. ದಯವಿಟ್ಟು ಈ ಬಗ್ಗೆ ನನ್ನ ಬಳಿ ಕೇಳಬೇಡಿ. ಏನೇ ಇದ್ದರೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಸ್ಪಷ್ಟಪಡಿಸಿದರು.

ಇಂದು ಅಥವಾ ನಾಳೆ ದೆಹಲಿಗೆ ವಾಪಸ್‌:

ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ವಾಪಸಾಗುವ ಸಾಧ್ಯತೆಯಿದೆ.

ದೆಹಲಿಗೆ ವಾಪಸಾಗಿ ನ.26 ರ ನಂತರ ರಾಹುಲ್‌ಗಾಂಧಿ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಬಳಿಕ ರಾಜ್ಯ ರಾಜಕೀಯದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎನ್ನಲಾಗಿದೆ.